RENUKA RENUSHREE May 20, 2019

" ಶ್ರೀ ತುಳಜಾ ಭವಾನಿ ದೇವಿ - ತುಳಜಾಪುರ " ---------------------------------------------,------- ಮಹಾರಾಷ್ಟ್ರದ ಉಸ್ಮಾನಬಾದಜಿಲ್ಲೆಯ ಒಂದು ಹಳ್ಳಿ ಚಿಂಚ್ ಪುರ್.ಹುಣೆಸೆ ಗಿಡ ಬಹಳ ಬೆಳೆಯುವದರಿಂದ ಈ ಊರಿಗೆ ಚಿಂಚ್ ಪುರ್ ಎಂದು ಹೆಸರು ಬಂದಿದೆ. ಯಾವಾಗ ಶ್ರೀ ಶಕ್ತಿ ಮಾತೆ , ಭೂಲೋಕದಲ್ಲಿ " ತುಳಜಾ ಭವಾನಿ " ಅವತಾರದಲ್ಲಿ ಬಂದು ಇಲ್ಲಿ ನೆಲಸಿದಳೋ , ಆಗಿನಿಂದ ಚಿಂಚಪೂರ್ - ತುಳಜಾಪುರ್ ವಾಯಿತು." ತುಳಜಾಪುರ - ತುಳಜಾ ಭವಾನಿ " - ಪ್ರಸಿದ್ಧ ಯಾತ್ರಾ ಸ್ಥಳ.ಪುಣ್ಯ ಕ್ಷೇತ್ರ ವಾಯಿತು. ತುಳಜಾಪುರ - ಸೋಲಾಪುರದಿಂದ 45 ಕಿ.ಮಿ. ದೂರದಲ್ಲಿದೆ.ಹಾಗೆಯೇ ಸಹ್ಯಾದ್ರಿ ಶ್ರೇಣಿಯ ಯಮುನಾಚಲ ಬೆಟ್ಟ ಪ್ರದೇಶದಲ್ಲಿದೆ. ಭಾರತದಲ್ಲಿರುವ 51 ಶಕ್ತಿ ಪೀಠಗಳಲ್ಲಿ ಇದು ಒಂದು.ಶಕ್ತಿ ಪೀಠದಲ್ಲಿ 2ನೇಯದು ತುಳಜಾಪುರ ತುಳಜಾಭವಾನಿ. ವರಾಹಿ, ಬ್ರಹ್ಮಿ, ವೈಷ್ಣವಿ , ಕೌಮರಿ , ಇಂದ್ರಾಣಿ ಶಾಂಭವಿ, ಭವಾನಿ ( ಅಂಬಾ ).ಹೀಗೆ ಸಪ್ತ ಕನ್ಯೆಯ ರೂಪದಲ್ಲಿ ಶಕ್ತಿಮಾತೆ ಪಾರ್ವತಿ ಅವತರಿಸಿ ರಾಕ್ಷಸರನ್ನು ಕಾಲ - ಕಾಲಕ್ಕೆ ಸಂಹರಿಸುತ್ತಾ ಬಂದಿದ್ದಾಳೆ. ಮಾತಂಗ ರಾಕ್ಷಸನನ್ನು ಸಂಹರಿಸಿದ್ದರಿಂದ ' ಮಾತಂಗಿ ' ಎಂದು , ಮಹಿಷಾಸುರನನ್ನು ಸಂಹ ರಿಸಿದ್ದರಿಂದ ' ಮಹಿಷ ಮರ್ಧಿನಿ " ಎಂದು ಕರೆಯುವದುಂಟು. ಸರ್ವಾಲಂಕಾರಭೂಷಿತಳು, ದಿವ್ಯಾಸ್ತ್ರ ಹೊಂದಿ ದವಳೂ, ಸಕಲ ಮಂಗಳ ದ್ರವ್ಯಗಳಿಂದ ಪೂಜಿಸಲ್ಪಡುವ ಮಾತೆಯ ಎಡ ಹಸ್ತದಲ್ಲಿ ಮಹಿಷನ ಶಿರ ಹಿಡಿದ ದೃಶ್ಯ ಬಹಳ ಆಕರ್ಷಣೀಯ ವಾಗಿದೆ. ಮುಂದೆ ತನ್ನ ವಾಹನವಾದ ಸಿಂಹ ವಿರಾಜಮಾನವಾಗಿದೆ. ಶಿವಾಜಿ ಮಹಾರಾಜರು ಹಾಗು ಅವರ ತಾಯಿ ಜೀಜಾಬಾಯಿಯ ಆರಾಧ್ಯ ದೇವತೆ ತುಳಜಾ ಭವಾನಿ. ಇಲ್ಲಿ ಪರಮ ಪಾವನವಾದ ಕಲ್ಯಾಣಿ ( ತೀರ್ಥ ) ಗಳಿವೆ.ಈ ಕಲ್ಯಾಣದಲ್ಲಿ ಮಿಂದರೆ, ಭಕ್ತರ ಸರ್ವ ಸಕಲ ಪಾಪ ಕರ್ಮಗಳು ಮುಕ್ತಿಯಾಗುತ್ತವೆ ಎಂದು ಭಕ್ತರ ನಂಬಿಕೆಯಾಗಿದೆ. ದೇವಾಲಯದ ಉತ್ತರ ದಿಕ್ಕಿಗೆ, ಊರ ಹೊರ ವಲಯದಲ್ಲಿ ತುಳಜಾಭವಾನಿಯ ಸಣ್ಣ ಮೂರ್ತಿ ಇದೆ.ಇದಕ್ಕೆ ' ಧಕ್ತೆ ತುಳಜಾಪುರ" ಎಂದು ಕರೆಯುತ್ತಾರೆ. ಮುಖ್ಯ ದೇವಾಲಯಕ್ಕೆ ಬರುವ ಮುನ್ನ , ದಕ್ತೆ ತುಳಜಾಪುರ್- ತುಳಜಾಭವಾನಿಯ ದರ್ಶನ ಪದೆಯುವದು ಹೆಚ್ಚು ಶ್ರೇಯಸ್ಕರ. ಯಾವುದೇ ಶುಭ ಕಾರ್ಯಗಳಾಗಲಿ ಶ್ರೀ ಮಾತೆಯ ಸನ್ನಿಧಿಗೆ ಬಂದು ಆಶೀರ್ವಾದ ಪಡೆಯುವದು ಇಲ್ಲಿ ಸಾಮಾನ್ಯವಾಗಿದೆ. ದೊಡ್ಡ ಚಿತ್ರಗಳು - ತುಳಜಾಭವಾನಿ ದೇವಸ್ಥಾನ ಹಾಗು ಅಮ್ಮನವರು. ಸಣ್ಣ ಚಿತ್ರಗಳು ಧಕ್ತೆತುಳಜಾಪುರ ಮಂದಿರ ಹಾಗು ಅಮ್ಮನವರು. " ಓಂ ಶ್ರೀ ತುಳಜಾಭವಾನಿ ದೇವಿಯೇ ನಮಃ " ಚಿತ್ರ ಹಾಗು ಮಾಹಿತಿ ಕೃಪೆ - ಅಂತರ್ಜಾಲ. ಎನ್.ಆರ್.ಸಂಗಾ

+32 प्रतिक्रिया 3 कॉमेंट्स • 4 शेयर
RENUKA RENUSHREE May 20, 2019

#ಪ್ರಜ್ಞಾವಿವರ್ಧನ_ಕಾರ್ತಿಕೇಯ_ಸ್ತೋತ್ರಂ ಮಕ್ಕಳ ವಿದ್ಯಾಭ್ಯಾಸಕ್ಕೆ ಮತ್ತು ಬುದ್ಧಿ ಬೆಳವಣಿಗೆಗೆ ಈ ಸ್ತೋತ್ರ ಬಹಳ ಒಳ್ಳೆಯದು ಅದಕ್ಕೆ ಈ ಸ್ತೋತ್ರಕ್ಕೆ ಪ್ರಜ್ಞಾ ವಿವರ್ಧನ ಸ್ತೋತ್ರ ಅಂತ ಶ್ರದ್ಧೆಯಿಂದ ಪಾರಾಯಣ ಮಾಬಡಿದಲ್ಲಿ ಮೂಕನು ಸಹ ಮಾತನಾಡ ಬಲ್ಲ ಅಷ್ಟು ಶಕ್ತಿಯುತ ವಾದದ್ದು ಬೆಳಿಗ್ಗೆ ಸೂರ್ಯೋದಯ ಸಮಯದಲ್ಲಿ ಅರಳಿ ಮರದ ಕೆಳಗೆ ಕುಳಿತು ಹೇಳಿದಲ್ಲಿ ಫಲ ಶತ ಸಿದ್ದ.‌. ಸ್ತೋತ್ರ... ಶ್ರೀಗಣೇಶಾಯ_ನಮಃ । ಸ್ಕಂದ_ಉವಾಚ । ಯೋಗೀಶ್ವರೋ ಮಹಾಸೇನಃ ಕಾರ್ತಿಕೇಯೋಽಗ್ನಿನನ್ದನಃ । ಸ್ಕನ್ದಃ ಕುಮಾರಃ ಸೇನಾನೀಃ ಸ್ವಾಮೀ ಶಂಕರಸಮ್ಭವಃ ॥ 1॥ ಗಾಂಗೇಯಸ್ತಾಮ್ರಚೂಡಶ್ಚ ಬ್ರಹ್ಮಚಾರೀ ಶಿಖಿಧ್ವಜಃ । ತಾರಕಾರಿರುಮಾಪುತ್ರಃ ಕ್ರೌಂಚಾರಿಶ್ಚ ಷಡಾನನಃ ॥ 2॥ ಶಬ್ದಬ್ರಹ್ಮಸಮುದ್ರಶ್ಚ ಸಿದ್ಧಃ ಸಾರಸ್ವತೋ ಗುಹಃ । ಸನತ್ಕುಮಾರೋ ಭಗವಾನ್ ಭೋಗಮೋಕ್ಷಫಲಪ್ರದಃ ॥ 3॥ ಶರಜನ್ಮಾ ಗಣಾಧೀಶಪೂರ್ವಜೋ ಮುಕ್ತಿಮಾರ್ಗಕೃತ್ । ಸರ್ವಾಗಮಪ್ರಣೇತಾ ಚ ವಾಂಛಿತಾರ್ಥಪ್ರದರ್ಶನಃ ॥ 4॥ ಅಷ್ಟಾವಿಂಶತಿನಾಮಾನಿ ಮದೀಯಾನೀತಿಯಃ ಪಠೇತ್ । ಪ್ರತ್ಯೂಷಂ ಶ್ರದ್ಧಯಾ ಯುಕ್ತೋ ಮೂಕೋ ವಾಚಸ್ಪತಿರ್ಭವೇತ್ ॥ 5॥ ಮಹಾಮನ್ತ್ರಮಯಾನೀತಿ ಮಮ ನಾಮಾನುಕೀರ್ತನಮ್ । ಮಹಾಪ್ರಜ್ಞಾಮವಾಪ್ನೋತಿ ನಾತ್ರ ಕಾರ್ಯಾ ವಿಚಾರಣಾ ॥ 6॥ ॥ ಇತಿ ಶ್ರೀರುದ್ರಯಾಮಲೇ ಪ್ರಜ್ಞಾವಿವರ್ಧನಾಖ್ಯಂ ಶ್ರೀಮತ್ಕಾರ್ತಿಕೇಯಸ್ತೋತ್ರಂ ಸಮ್ಪೂರ್ಣಮ್ ॥ SRUTHI DEVARAJ

+22 प्रतिक्रिया 1 कॉमेंट्स • 14 शेयर
RENUKA RENUSHREE May 19, 2019

ಕೌರವ – ಪಾಂಡವರ ನಡುವಿನ ಕುರುಕ್ಷೇತ್ರ ಯುದ್ಧ 18 ದಿನಗಳ ಕಾಲ ನಡೆಯಿತು. ಅಂತಿಮವಾಗಿ ಕೌರವರಿಗಿಂತ ಕಡಿಮೆ ಸಂಖ್ಯೆಯಲ್ಲಿದ್ದರೂ ಪಾಂಡವರೇ ವಿಜಯಿಗಳಾದರು. ಈ ಯುದ್ಧದ 18 ದಿನಗಳ ಪ್ರತಿದಿನದ ಕಾಲಾನುಕ್ರಮ ಸಾರಾಂಶ ಇಲ್ಲಿದೆ … ದಿನ 1 : ಮೊದಲ ದಿನ ಕೌರವರ ಕೈಮೇಲಾಗಿ ಪಾಂಡವ ಸೇನೆಗೆ ದೊಡ್ಡ ನಷ್ಟ ಉಂಟಾಯಿತು. ದಿನ 2 : ಎರಡನೇ ದಿನ ಪಾಂಡವರು ಚೇತರಿಸಿಕೊಂಡು, ದಿನಾಂತದಲ್ಲಿ ಕೌರವರ ಸೇನೆಯನ್ನು ಮಣಿಸಿದರು. ಈ ದಿನ ಕೌರವಸೇನೆ ಅಪಾರ ನಷ್ಟ ಅನುಭವಿಸಿತು ದಿನ 3 : ಅಭಿಮನ್ಯು ಮತ್ತು ಘಟೋತ್ಕಚ ರಣಾಂಗಣದಲ್ಲಿ ಬಿರುಗಾಳಿ ಎಬ್ಬಿಸಿದರು. ದಿನ 4 : ಶಾಂತಿ ಸಂಧಾನ ಮಾಡಿಕೊಳ್ಳುವಂತೆ ದುರ್ಯೋಧನನಿಗೆ ಭೀಷ್ಮ ಪಿತಾಮಹ ಸಲಹೆ ನೀಡಿದ ದಿನ 5 : ದ್ರೋಣ ಸಾತ್ಯಕಿ ಮೇಲೆರಗಿ ಘಾಸಿಗೊಳಿಸಿದ. ನಡುವೆ ಬಂದ ಭೀಮ, ಸಾತ್ಯಕಿಯನ್ನು ರಕ್ಷಿಸಿದ ದಿನ 6 : ಕೌರವರು ಹೀನಾಯ ಸೋಲು ಅನುಭವಿಸಿದರು ದಿನ 7 : ದ್ರೋಣನ ವೀರಾವೇಶಕ್ಕೆ ಪಾಂಡವ ಸೇನೆ ಪತರಗುಟ್ಟಿತು. ಅವನು ಪಾಂಡವರ ಪಕ್ಷದಲ್ಲಿದ್ದ ವಿರಾಟರಾಜನ ಪುತ್ರನನ್ನು ಕೊಂದ. ದಿನ 8 : ಭೀಮನೊಬ್ಬನೇ ಧೃತರಾಷ್ಟ್ರನ 17 ಪುತ್ರರನ್ನು ಕೊಂದುಹಾಕಿದ. ಶಕುನಿಯ ಸಹೋದರರು ಅರ್ಜುನನಿಂದ ಹತರಾದರು. ದಿನ 9 : ರಣಕಲಿಯಂತೆ ಕಾದುತ್ತಿದ್ದ ಭೀಷ್ಮನೆದುರು ಶಿಖಂಡಿಯನ್ನು ಯುದ್ಧಕ್ಕೆ ಕಳಿಸಲಾಯಿತು ದಿನ 10 : ಶಿಖಂಡಿಯೆದುರು ಯುದ್ಧ ಮಾಡಲು ಒಲ್ಲದ ಭೀಷ್ಮ, ಬಾಣಗಳಿಗೆ ಎದೆಯೊಡ್ಡಿದ. ಅನಂತರ ಶರಶಯ್ಯೆಯಲ್ಲಿ ಒರಗಿದ ದಿನ 11 : ಅರ್ಜುನ ದ್ರೋಣರನ್ನು ಸೋಲಿಸಿದ ದಿನ 12 : ಅರ್ಜುನ ಮತ್ತು ಭಗದತ್ತರ ನಡುವೆ ಭೀಕರ ಕಾಳಗ ನಡೆಯಿತು ದಿನ 13 : ಚಕ್ರವ್ಯೂಹಕ್ಕೆ ಸಿಲುಕಿದ ಅಭಿಮನ್ಯು ವೀರಮರಣ ಹೊಂದಿದ ದಿನ 14 : ಘಟೋತ್ಕಚನಿಂದಾಗ ಕರ್ಣ ತನ್ನ ವಾಸವೀ ಶಕ್ತಿಯನ್ನು ಕಳೆದುಕೊಂಡ ದಿನ 15 : ದ್ರುಪದ ರಾಜನ ಮಗ ದೃಷ್ಟದ್ಯುಮ್ನ ದ್ರೋಣರನ್ನು ಕೊಂದ. ಮತ್ತು ಆ ಮೂಲಕ ದ್ರುಪದನ ಶಪಥ ಪೂರೈಸಿತು. ದಿನ 16 : ಭೀಮ ದುಷ್ಯಾಸನನನ್ನು ಕೊಂದು ಅವನ ರಕ್ತವನ್ನು ದ್ರೌಪದಿಯ ಮುಡಿಗೇರಿಸಿ ಶಪಥ ಪೂರೈಸಿದ ದಿನ 17 : ಪರಶುರಾಮರ ಶಾಪದಿಂದ ಶಸ್ತ್ರಪ್ರಯೋಗದ ಮಂತ್ರ ಮರೆತ ಕರ್ಣನನ್ನು ಅರ್ಜುನ ಕೊಂದ ದಿನ 18 : ಭೀಮ ದುರ್ಯೋಧನನ ತೊಡೆಗೆ ತನ್ನ ಗದೆಯಿಂದ ಪ್ರಹಾರ ಮಾಡಿ ಅವನನ್ನು ಕೊಂದ ಪುಷ್ಪಾ ಆಚಾರ್ಯರು.ಪಿ

+22 प्रतिक्रिया 2 कॉमेंट्स • 10 शेयर
RENUKA RENUSHREE May 19, 2019

ಶ್ರವಣ ನಕ್ಷತ್ರದವರಿಗೆ ಜಾಗೃತಿಯಾಗಿ ಓದಿ ನೇನಪು ಇಟ್ಟು ಕೊಳ್ಳಿ. ಶ್ರವಣ ನಕ್ಷತ್ರದವರು ಅನಂತಪದ್ಮನಾಭ ಸ್ವಾಮಿಯ ಕ್ಷೇತ್ರಕ್ಕೆ ಹೋಗಿ ಬನ್ನಿ. ನಾನು ಹೇಳಿದ ಈ ದಿನವೆ ಹೋಗ ಬೇಕು ಹುಣ್ಣಿಮೆಯ ದಿನ ಹೋಗ ಬೇಕು. ಹುಣ್ಣಿಮೆಯ ದಿನ ಬೆಳಿಗ್ಗೆ ಅಲ್ಲಿ ಸ್ವಾಮಿಯ ದರ್ಶನ ಮಾಡಿ ರಾತ್ರಿ ಅಲ್ಲೇ ಮಲಗಿ ಮತ್ತೆ ಬೆಳಿಗ್ಗೆ ದರ್ಶನ ಮಾಡಿ ಮನೆಗೆ ಬಂದು ಬಿಡಿ ಎಂತಹಾ ಸಮಸ್ಯೆ ಇದರು ಬಗ್ಗೆ ಹರಿಯುವುದು ಇದು ತಮಾಷೆ ಅಲ್ಲ ಸತ್ಯ ಮಾಡಿ ನೋಡಿ ನೀಮಗೆ ತೀಳಿಯುವುದು. ನಾನು ಹೇಳಿರುವ ಮುಹೂರ್ತದಲ್ಲೇ ಹೋಗ ಬೇಕು ಮರೆಯಬೇಡಿ. ಶ್ರೀ ಹರಿ ವಾಕ್ ಸುಳ್ಳಾಗಲ್ಲಾರದು. ಇದು ಇನ್ನೂ ಐವತ್ತು ವರ್ಷವಾದರು ಮಾಡಿ ಪರವಾಗಿಲ್ಲ ಆದರೆ ನಾನು ತೀಳಿಸಿರುವ ಮುಹೂರ್ತದಲ್ಲೇ ಹೋಗ ಬೇಕು ನೇನಪಿರಲ್ಲಿ ಜೊಲೆಂಜ್ ಮಾಡುವೆ ನಂತರ ನೋಡಿ ಹೋಗಿ ಬನ್ನಿ ಶುಭವಾಗಲಿ. ಪುಷ್ಪಾ ಆಚಾರ್ಯರು.ಪಿ

+24 प्रतिक्रिया 0 कॉमेंट्स • 5 शेयर