Manjula Vijaya Apr 19, 2019

+6 प्रतिक्रिया 1 कॉमेंट्स • 0 शेयर
Manjula Vijaya Apr 19, 2019

ಜಗದಕ್ಕ (ಅಕ್ಕಮಹಾದೇವಿ) ಜಯಂತಿಯ ಶುಭಾಷಯಗಳು ಹೆಣ್ಣು ಮನೆಯ ಹೊಸ್ತಿಲು ದಾಟುವುದೇ ಅಪರಾಧವಾಗಿದ್ದ ಕಾಲವದು. ತನ್ನೊಡನೆ ಅಪ್ಪ, ಅಣ್ಣ, ತಮ್ಮ ಅಥವಾ ಗಂಡ ಯಾರೊಬ್ಬರಾದರೂ ಆಕೆಯ ರಕ್ಷಣೆಗಿದ್ದರೆ ಮಾತ್ರ ಆಕೆ ಹೊರಗೆ ಹೋಗಬಹುದಿತ್ತು. ಇಲ್ಲವಾದಲ್ಲಿ ಸದಾ ನಾಲ್ಕು ಗೋಡೆಗಳ ನಡುವೆ ಬಂಧಿಯಾಗಿಯೇ ತನ್ನ ಇಡೀ ಜೀವನ ತಳ್ಳಬೇಕಾಗಿತ್ತು. ಇಪ್ಪತ್ತೊಂದನೇ ಶತಮಾನದ ಈ ಯುಗದಲ್ಲೂ ಹೆಣ್ಣು ತಾನು ಎಷ್ಟೇ ಸಬಲ ಎಂದು ಹೇಳಿಕೊಂಡರೂ ಕೂಡ ನೈಜ ಪರಿಸ್ಥಿತಿ ಹಾಗಿಲ್ಲ. ಇನ್ನು ಒಂಭೈನೂರು ವರ್ಷಗಳ ಹಿಂದಿನ ಪರಿಸ್ಥಿತಿಯನ್ನು ಒಮ್ಮೆ ಆಲೋಚಿಸಿ, ಅಂದಿನ ಪರಿಸ್ಥಿತಿಯನ್ನೊಮ್ಮೆ ತಮ್ಮ ಸ್ಮೃತಿಪಟಲದ ಮೇಲೆ ಹಾಯಿಸಿರಿ. ಅಂದಿನ ಹೆಣ್ಣಿನ ಸ್ಥಾನಮಾನ ಹೇಗಿತ್ತೆಂದು ನೀವೇ ಊಹಿಸಿ. ಹನ್ನೆರಡನೇ ಶತಮಾದಲ್ಲಿ ನಮ್ಮ ಕನ್ನಡನಾಡು ಜಗತ್ತಿಗೆ ಒಬ್ಬ ವೀರ ವಿರಾಗಿಣಿಯನ್ನು ಬಳುವಳಿಯಾಗಿ ಕೊಡುತ್ತದೆ. ಮೌಢ್ಯದ ಜಾಢ್ಯವೇ ತುಂಬಿ ಕೊಳೆತು ನಾರುತ್ತಿದ್ದ ಸಮಾಜದಲ್ಲಿ ಅತ್ಯಂತ ವೈಚಾರಿಕ ಹಾಗೂ ವಿವೇಕ ಪ್ರಜ್ಞೆಯುಳ್ಳ ಹದಿಹರೆಯದ ಹೆಣ್ಣುಮಗಳೊಬ್ಬಳು ಮದುವೆಯನ್ನು ಧಿಕ್ಕರಿಸಿ ನೂರಾರು ಮೈಲು ದೂರದಲ್ಲಿದ್ದ ಶಿವ ಪ್ರಜ್ಞೆಯ ಬೆಳಕೇ ತಾನಾದ ಬಸವಣ್ಣ ಮತ್ತು ಅನೇಕ ಶರಣರ ಒಡನಾಟವನ್ನ ಬಯಸಿ, ಆ ಶಿವಬೆಳಗನ್ನು ಕಾಣಲು, ಆ ಬೆಳಗಿನೊಳಗೆ ಬೆಳಗಾಗಲು ಶಿವಮೊಗ್ಗ ಜಿಲ್ಲೆಯ ಉಡುತಡಿಯಿಂದ ಬೀದರ್ ಜಿಲ್ಲೆಯ ಬಸವ ಕಲ್ಯಾಣದವರೆಗೆ ಏಕಾಂಗಿಯಾಗಿ ಉಟ್ಟ ಬಟ್ಟೆಯನ್ನು ಬಿಸಾಕಿ, ಬರಿಗಾಲಲ್ಲಿ ಹಗಲಿರುಳೆನ್ನದೆ ನಡೆದು ಶರಣರನ್ನು ಕೂಡುತ್ತಾಳೆ. ಇಷ್ಟು ಕಷ್ಟದಿಂದ ನೂರಾರು ಮೈಲಿ ದೂರ ನಡೆದು ಅಲ್ಲಿಗೆ ಹೋಗಬೇಕಾದರೆ ಕಲ್ಯಾಣ ಹೇಗಿದ್ದಿರಬೇಕು! ನಮಗೆ ಇಂದು ಊಹಿಸಲೂ ಅಸಾಧ್ಯ! ಕಲ್ಯಾಣದ ಶರಣರನ್ನು ಕೂಡಿದ ಅಕ್ಕನಿಗೆ ನದಿಯೊಂದು ತಾನು ಸೇರಬೇಕಾದ ಗಮ್ಯ ಸಮುದ್ರವನ್ನು ಸೇರಿದಂತಾ ಭಾವ, ಬಸವಣ್ಣ, ಅಲ್ಲಮ ಪ್ರಭು ದೇವರು, ಚೆನ್ನಬಸವಣ್ಣ, ಅಕ್ಕ ನಾಗಮ್ಮ, ನೀಲಮ್ಮ, ಸಿದ್ದರಾಮೇಶ್ವರ ಮಾಚಿತಂದೆ, ಇಂಥಾ ಅಮರಗಣಗಳನ್ನೆಲ್ಲಾ ಕಂಡು ತನ್ನ ಜೀವನ ಪಾವನವಾಯಿತೆಂದು ಅವರತ್ತ ಸಾರ್ಥಕತೆಯ ನೋಟ ಬೀರಿ, ಸಾಧನೆಯ ಕಡೆ ಮುಖಮಾಡಿ ಅಸಾಧ್ಯವಾದುದನ್ನು ಸಾಧಿಸಿ, ಅನುಭಾವದ ವಚನಗಳನ್ನು ಜಗತ್ತಿಗೆ ಕೊಟ್ಟು ಶ್ರೀಶೈಲದಲ್ಲಿ ಅಂತಿಮವಾಗಿ ಕಾಯವನ್ನು ವಿಸರ್ಜಿಸಿ ಬಯಲಲ್ಲಿ ಬಯಲಾದ ಅಕ್ಕ ಇಡೀ ಮಾನವ ಕುಲಕ್ಕೇ ಆದರ್ಶ ಹಾಗೂ ದಾರಿದೀಪ. ಅಕ್ಕಮಹಾದೇವಿ ಹುಟ್ಟಿದ ದಿನ ಹುಣ್ಣಿಮೆ. ವರ್ಷದ ಇತರೆಲ್ಲಾ ಹುಣ್ಣಿಮೆಗಳಿಗಿಂತ ಅಂದು ವಿಷೇಷವಾಗಿ ಚಂದ್ರ ಹೆಚ್ಚು ಪ್ರಕಾಶಮಾನವಾಗಿ ಕಾಣುವುದು, ಅದಕ್ಕೆ ಧವನದ ಹುಣ್ಣಿಮೆ ಎನ್ನುತ್ತಾರೆ. "ಸತ್ಯ ಸದ್ಭಕ್ತರ ಸಂಭಾಷಣೆ ನುಡಿಗಡಣವೆಂಬುದು ನಿಚ್ಚಲೊಂದು ಉಪದೇಶ ಮಂತ್ರವ ಕಲಿತಂತೆ. ಬಚ್ಚಬರಿಯ ಭವಿಗಳ ಸಂಗದಲ್ಲಿದ್ದರೆ ಕಿಚ್ಚಿನೊಳಗೆ ಬಿದ್ದ ಕೀಡೆಯಂತಪ್ಪುದಯ್ಯ. ಸುಚಿತ್ತದಿಂದ ನಿಮ್ಮ ಸದ್ಭಕ್ತರ ಸಂಗದಲ್ಲಿರಿಸದಿರ್ದಡೆ ನಾನಿನ್ನೆತ್ತ ಸಾರುವೆನು ಹೇಳಾ ಚೆನ್ನಮಲ್ಲಿಕಾರ್ಜುನಾ?" "ಆರೂ ಇಲ್ಲದವಳೆಂದು ಆಳಿಗೊಳಲುಬೇಡ ಕಂಡೆಯಾ ಏನ ಮಾಡಿದಡೂ ಆನಂಜುವಳಲ್ಲ. ತರಗೆಲೆಯ ಮೆಲಿದು ಆನಿಹೆನು, ಸರಿಯ ಮೇಲೊರಗಿ ಆನಿಹೆನು. ಚೆನ್ನಮಲ್ಲಿಕಾರ್ಜುನಯ್ಯಾ, ಕರ ಕೇಡನೊಡ್ಡಿದಡೆ ಒಡಲನು ಪ್ರಾಣವನು ನಿಮಗರ್ಪಿಸಿ ಶುದ್ಧಳಹೆನು." "ಮೂಲಾಧಾರದ ಬೇರ ಮೆಟ್ಟಿ, ಭ್ರೂಮಂಡಲವನೇರಿದೆ. ಆಚಾರದ ಬೇರ ಹಿಡಿದು ಐಕ್ಯದ ತುದಿಯನೇರಿದೆ. ವೈರಾಗ್ಯದ ಸೋಪಾನದಿಂದ ಶ್ರೀಗಿರಿಯನೇರಿದೆ. ಕೈವಿಡಿದು ತೆಗೆದುಕೊಳ್ಳಾ, ಚೆನ್ನಮಲ್ಲಿಕಾರ್ಜುನಾ." ಆಧ್ಯಾತ್ಮ ಸಾಧನೆಯ ತುತ್ತತುದಿಯನೇರಿದ ಅಕ್ಕಮಹಾದೇವಿ ಚೆನ್ನಮಲ್ಲಿಕಾರ್ಜುನನೆಂಬ ಬಯಲ ಬೆರೆದು, ತಮ್ಮ ವಚನಗಳ ಮೂಲಕ ಜಗತ್ತಿಗೆ ಬೆಳಕಾಗಿದ್ದಾರೆ. ಅವರ ಪಥದಲ್ಲಿ ನಾವೆಲ್ಲರೂ ಸಾಗೋಣವೆಂದು ಸಂಕಲ್ಪಿಸೋಣ.

+5 प्रतिक्रिया 1 कॉमेंट्स • 4 शेयर
Manjula Vijaya Apr 19, 2019

+2 प्रतिक्रिया 0 कॉमेंट्स • 0 शेयर
Manjula Vijaya Apr 19, 2019

+9 प्रतिक्रिया 0 कॉमेंट्स • 1 शेयर