*ವಿಳ್ಯೇದೆಲೆಯ_ವೈಶಿಷ್ಟ್ಯತೆಯೇನು* ? ಶುಭಕರವಾದ ಅಷ್ಟವಸ್ತುಗಳಲ್ಲಿ ವೀಳ್ಯೆದೆಲೆಯೂ ಸಹ ಒಂದು ಎಂದು ನಮ್ಮ ಸಂಪ್ರದಾಯ ತಿಳಿಸುತ್ತದೆ. ವೀಳ್ಯೆದೆಲೆ ಇಂತಹ ಶುಭ ಲಕ್ಷಣವನ್ನು ಹೊಂದಿರುವುದರಲ್ಲಿ ಅನೇಕ ದೇವತೆಗಳ ಗುಣವನ್ನು ಅಡಗಿಸಿಕೊಂಡಿದೆ. ವಿಳ್ಳೆಯದೆಲೆ ಮೊದಲಲ್ಲಿ ಲಕ್ಷ್ಮಿದೇವಿ, ಮಧ್ಯ ಭಾಗದಲ್ಲಿ ಸರಸ್ವತಿ ಹಾಗೂ ಕೊನೆಯ ಭಾಗದಲ್ಲಿ ಜ್ಯೇಷ್ಠ ಭಗವತಿ ನೆಲೆಸಿರುವ ರೆಂಬ ಒಂದು ನಂಬಿಕೆ. ಈ ಎಲೆಯ ಎಡಭಾಗದಲ್ಲಿ ಪಾರ್ವತಿ ಮಾತೆ, ಬಲಭಾಗದಲ್ಲಿ ಭೂದೇವಿ, ಮುಂದಿನ ಭಾಗದಲ್ಲಿ ಶಿವನು ಎಲೆಯ ಪೂರ್ತಿಯಾಗಿ ಮೇಲ್ಭಾಗದಲ್ಲಿ ವಿಷ್ಣು ದೇವರು ತಮ್ಮ ತಮ್ಮ ಸ್ಥಾನಗಳನ್ನು ಹೊಂದಿರುವರೆಂಬ ನಂಬಿಕೆ. ಈ ದೇವತೆಗಳೇ ಅಲ್ಲದೆ ಶುಕ್ರನು, ಇಂದ್ರನು, ಸೂರ್ಯನು ಹಾಗೂ ಕಾಮದೇವನೂ ಸಹ ವೀಳ್ಯದೆಲೆಯ ಮೇಲೆ ವಿವಿಧ ಭಾಗಗಳಲ್ಲಿ ಅವರವರ ಸ್ಥಾನಗಳಲ್ಲಿ ಇರುವರೆಂದು ನಮ್ಮ ಶಾಸ್ತ್ರಗಳು ಹೇಳುತ್ತಿವೆ.ವಾಸ್ತವವಾಗಿ ಈ ವಿವಿಧ ದೇವತೆಗಳು ವೀಳ್ಯದೆಲೆಯ ಅನೇಕ ಶುಭ ಗುಣಗಳ ತತ್ವಗಳನ್ನು ವ್ಯಕ್ತಪಡಿಸುತ್ತಿದ್ದಾರೆ.ಈ ಕಾರಣದಿಂದಲೇ ವೀಳ್ಯದೆಲೆಯ ವಿನಿಯೋಗವನ್ನು ವಿವಿಧ ವಿಧಗಳಾಗಿ ಉಪಯೋಗಿಸುವ ಹಾಗೆ ನಮ್ಮ ಹಿರಿಯರು ಶಾಸ್ತ್ರಗಳನ್ನು ರಚಿಸಿರುವರು. ಎಲೆ ಒಣಗಿ ಹೋದರೂ, ರಂಧ್ರ ಬಿದ್ದಿದ್ದರೂ, ಹರಿದು ಹೋಗಿದ್ದರೂ ಸುಕ್ಕಾಗಿದ್ದರೂ ಸಹ ಈ ಎಲೆಗಳನ್ನು ಉಪಯೋಗಿಸಬಾರದೆಂದು ತಿಳಿಸಿರುವರು. ವೀಳ್ಯದೆಲೆಯನ್ನು ಬೆಳಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ ಸಮಯದಲ್ಲಿ ಸೇವಿಸುವುದು ಒಳ್ಳೆಯದೆಂದು ತಿಳಿಸಲಾಗಿದೆ. ಆದರೆ ಉಪವಾಸ ದೀಕ್ಷೆಯಲ್ಲಿ ಇರುವ ದಿನಗಳಲ್ಲಿ ಮಾತ್ರ ವೀಳ್ಯದೆಲೆಯನ್ನು ಸೇವಿಸುವುದನ್ನು ನಿಲ್ಲಿಸಬೇಕು. ವೈಜ್ಞಾನಿಕವಾಗಿ ವೀಳ್ಯದೆಲೆಯಲ್ಲಿ ಕ್ಯಾಲ್ಸಿಯಂ ಅಂಶ ಇರುವುದರಿಂದ ಅದು ನಮ್ಮ ಜೀರ್ಣಕ್ರಿಯೆಯನ್ನು ಸುಲಲಿತಗೊಳಿಸುತ್ತದೆ ಹಾಗೂ ಇದರಲ್ಲಿ ರೋಗ ನಿರೋಧಕ ಶಕ್ತಿ ಇದೆ ಎಂದು ಹಲವಾರು ಜನ ವೈದ್ಯರು ನಮಗೆ ತಿಳಿಸಿದ್ದಾರೆ. " ನಮ್ಮ ಸನಾತನ ಧರ್ಮದ ಪ್ರತಿಯೊಂದು ಆಚರಣೆಯಲ್ಲೂ ವೈಜ್ಞಾನಿಕ ಅರ್ಥವಿದೆ " ಕೃಪೆ-ಸಂಗ್ರಹ ಮಾಹಿತಿ

+4 प्रतिक्रिया 1 कॉमेंट्स • 4 शेयर

*ವೀರಶೈವ ಲಿಂಗಾಯತ ಯಾರು* ? ದೇಹದ ಮೇಲೆ ಇಷ್ಟಲಿಂಗ ಧಾರಣೆ ಮಾಡಿದವರು ಮಾತ್ರ ವೀರಶೈವ ಲಿಂಗಾಯತರು, ಇದು ಎಲ್ಲರೂ ಮುಖ್ಯವಾಗಿ ತಿಳಿಯಬೇಕಾದ ವಿಚಾರ , ಲಿಂಗ ದೀಕ್ಷೆ ಇಲ್ಲದವರು ವೀರಶೈವ ಲಿಂಗಾಯತ ಆಗಲು ಸಾಧ್ಯವಿಲ್ಲ , ಎಂದು ಧರ್ಮ ಗಟ್ಟಿಯಾಗಿ ಹೇಳಿದೆ, ಗುರುವಿನಿಂದ ಒಮ್ಮೆ ಲಿಂಗ ದೀಕ್ಷೆ ಅದ ಬಳಿಕ ಜೀವ ಇರುವ ವರೆಗೂ ಇಷ್ಟಲಿಂಗ ದೇಹದ ಮೇಲೆ, ಇರಬೇಕು, ಅದನು ನಾವು ಒಮ್ಮೆ ತೆಗೆದರೆ ಅಲ್ಲಿಗೆ ಅದರ ಶಕ್ತಿ ನಿರ್ಜೀವ, ಅಲ್ಲದೆ ಗುರುವಿಗೆ ದ್ರೋಹಾ ಮಾಡಿದ ಪಾಪವು ನಮ್ಮ ಮೇಲೆ ಇರುತ್ತದೆ, ದಯವಿಟ್ಟು ಪೂಜಿಸಿ ಮನೇಲ್ಲಿ ಲಿಂಗ ಇಡುವ ಮೂಡ ಪದ್ಧತಿ ಬಿಟ್ಟು ಸದಾ ಕಾಲ ಇಷ್ಟಲಿಂಗ ದೇಹದ ಮೇಲೆ ಧಾರಣೆ ಮಾಡಿ , ಮತ್ತೆ ದೇವಾಲಯದಲ್ಲಿ ಅಭಿಷೇಕ ಮಾಡಲು ಅಥವ ಯಾವುದೇ ಕಾರಣಕ್ಕೂ ಲಿಂಗ ನಿಮ್ಮ ದೇಹದಿಂದ ತೆಗೆದು ಬೇರೆ ಅವರ ಕೈಗೆ ಕೊಡಬೇಡಿ, ಆಕಸ್ಮಿಕವಾಗಿ ಇಷ್ಟಲಿಂಗ ಅರಿವಿಲ್ಲದೆ ನೆಲದ ಮೇಲೆ ಬಿದ್ದರೆ ಮೊಕ್ಷ ಪ್ರಾಪ್ತಿಗೆ ಕೂಡಲೇ ಪ್ರಾಣ ತ್ಯಾಗ ಮಾಡಬೇಕು ಎಂದು ಧರ್ಮ ಹೇಳುತ್ತದೆ, ಆದರೆ ಗುರು ಇರುವ ಕಾರಣ ಪ್ರಾಣ ತ್ಯಾಗ ಅವಶ್ಯ ಅಲ್ಲ ಏನುತ್ತರೆ ಪಂಡಿತರು, ಸದಾ ಇಷ್ಟಲಿಂಗ ಧಾರಣೆ ಮಾಡಿದವರಿಗೆ ಜನನ ಮರಣ ಸೂತಕ ಇಲ್ಲ, ಹೆಣ್ಣಿಗೆ ಋತು ಸೂತಕ ಇಲ್ಲ ಎಲ್ಲ ಸಮಯದಲ್ಲಿ ದೇಹದ ಮೇಲೆ ಇಷ್ಟಲಿಂಗ ಇರುವ ಕಾರಣ ಎಲ್ಲ ಸಮಯದಲ್ಲಿ ಪೂಜೆ ಮಾಡಲೇಬೇಕು ನಾವು ಅಲ್ಲಿ ಒಗುತ್ತೇವೆ, ಶಾಲೆ ಕಾಲೇಜು, ಕೆಲಸ, ಕಾರ್ಯ. ಕಚೇರಿ. ಎಲ್ಲೇ ಹೋದರು ನೀವು ಮಾಡುವ ಕಾಯಕ ವೃತ್ತಿ ಯಾವುದೇ ಆಗಿರಲಿ ದಯವಿಟ್ಟು ಇಷ್ಟಲಿಂಗ ಸದಾ ಕಾಲ ದೇಹದ ಮೇಲೆ ಧಾರಣೆ ಮಾಡಲೇಬೇಕು, ತಿಳಿಯದೆ ಇಷ್ಟಲಿಂಗ ಧರ್ಮ ಆಚರಣೆ ಬಿಡಬೇಡಿ ದಯವಿಟ್ಟು ಸರಿಯಾದ ವೀರಶೈವ ಲಿಂಗಾಯತ ಧರ್ಮ ಆಚರಣೆ ಅರಿತು ನಡೆಯಬೇಕು, ಡಿ ಎಂ ಕೆ ಆರಾಧ್ಯ ,

+3 प्रतिक्रिया 0 कॉमेंट्स • 5 शेयर

ಜಗತ್ತನ್ನೇ ತನ್ನ ಕುಟುಂಬವೆಂದು ತಿಳಿದವನು ಜಂಗಮ - ಶ್ರೀಶೈಲ ಜಗದ್ಗುರುಗಳು ಯಡೂರು - ಜಗತ್ತಿನ ಎಲ್ಲ ಜನರನ್ನು ತನ್ನ ಕುಟುಂಬವೆಂದು ಭಾವಿಸಿ ಅವರ ಕಲ್ಯಾಣಕ್ಕಾಗಿ ನಿರಂತರ ಶ್ರಮಿಸುವವನು ಪರಿಪೂರ್ಣ ಜಂಗಮನಾಗುತ್ತಾನೆ ಎಂದು ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ತಿಳಿಸಿದರು. ಅವರು ಯಡೂರಿನಲ್ಲಿ ಜರುಗುತ್ತಿರುವ ಶಿವ ಸಪ್ತಾಹ ಸಮಾರಂಭದ ಮೂರನೇ ದಿನದ ಕಾರ್ಯಕ್ರಮದ ಸಾನಿಧ್ಯವಹಿಸಿ ಆಶೀರ್ವಚನ ನೀಡುತ್ತಾ ಈ ವಿಚಾರವನ್ನು ಹೇಳಿದರು. ಜಂಗಮ ತತ್ವವು ವೀರಶೈವ ಧರ್ಮದ ಅಷ್ಟಾವರಣಗಳಲ್ಲಿ ಪೂಜ್ಯ ವಸ್ತುಗಳಾದ ಗುರು ಲಿಂಗ ಜಂಗಮ ಇವುಗಳಲ್ಲಿ ಮೂರನೇಯದಾಗಿದೆ. ಸಮಸ್ತ ವಿಶ್ವವನ್ನೇ ಬೆಳಗುವ ಪರಮಾತ್ಮ ಚೈತನ್ಯವನ್ನು ತನ್ನ ಸ್ವರೂಪವೆಂದು ತಿಳಿದು ಶಿವ ಸಾಕ್ಷಾತ್ಕಾರವನ್ನು ಪಡೆದುಕೊಂಡ ಶಿವಯೋಗಿಯೇ ಜಂಗಮನೆಂದು ಶಸ್ತ್ರದಲ್ಲಿ ಹೇಳಲಾಗಿದೆ. ಪರಿಪೂರ್ಣ ಜಂಗಮನಾಗಲು ಕೇವಲ ಜಂಗಮ ಕುಲದಲ್ಲಿ ಜನಿಸಿದರೆ ಮಾತ್ರ ಸಾಲದು, ಜಂಗಮ ವೇಷಭೂಷಣಗಳನ್ನು ಧರಿಸಿದರೆ ಮಾತ್ರ ಸಾಲದು, ಬದಲಾಗಿ ಸದಾಚಾರ ಸದ್ವಿಚಾರ ಸದ್ಗುಣಗಳನ್ನು ಅಳವಡಿಸಿಕೊಳ್ಳುವುದರ ಜೊತೆಗೆ ಶಿವಯೋಗಸಾಧನೆ ಮಾಡಿ ಶಿವಸಾಕ್ಷಾತ್ಕಾರವನ್ನು ಹೊಂದಬೇಕಾಗುತ್ತದೆ. ಶಿವನು ಶರಣಾಗತರಾಗಿ ತನ್ನ ಬಳಿಗೆ ಭಕ್ತಿಯಿಂದ ಬಂದವರನ್ನೆಲ್ಲ ಯಾವುದೇ ಭೇದಭಾವ ಮಾಡದೆ ಸ್ವೀಕರಿಸುವಂತೆ ಜಂಗಮನಾದವನು ಶಾಂತಿ ಸಮಾಧಾನಗಳನ್ನು ಬಯಸಿ ತನ್ನ ಬಳಿಗೆ ಬಂದ ಎಲ್ಲ ಶಿಷ್ಯರಿಗೆ ಸನ್ಮಾರ್ಗ ತೋರುವ ಮೂಲಕ ಉದ್ಧರಿಸುವ ಕಾರ್ಯವನ್ನು ಮಾಡುತ್ತಾನೆ. ಧರ್ಮದ ಮತ್ತು ಶಿವ ಜ್ಞಾನದ ಪ್ರಚಾರ ಪ್ರಸಾರ ಕಾರ್ಯ ಜಂಗಮನ ಪ್ರಮುಖ ಜವಾಬ್ದಾರಿಯಾಗಿದೆ. ಜಂಗಮ ತತ್ತ್ವದಲ್ಲಿ ಸ್ವಯಜಂಗಮ ಚರಜಂಗಮ ಮತ್ತು ಪರಜಂಗಮ ಎಂಬುದಾಗಿ ಮೂರು ಪ್ರಕಾರ. ಬಹಿರಂಗ ಸುಖಗಳಲ್ಲಿ ಉದಾಸೀನನಾಗಿ ತನ್ನೊಳಗೆ ತಾನಿದ್ದು ತನ್ನ ಬಳಿಗೆ ಬಂದ ಶಿಷ್ಯ ಸದ್ಭಕ್ತರಿಗೆ ಸನ್ಮಾರ್ಗವನ್ನು ತೋರುವ ಶಿವಯೋಗಿಯೇ ಸ್ವಯ ಜಂಗಮನೆನಿಸಿಕೊಳ್ಳುತ್ತಾನೆ. ಶಿವ ಸಾಕ್ಷಾತ್ಕಾರವನ್ನು ಪಡೆದು ತಾನು ಪಡೆದುಕೊಂಡಿರುವ ಶಿವಜ್ಞಾನ, ಶಿವಸಂಸ್ಕಾರಗಳನ್ನು ಜನರಿಗೆ ನೀಡಲು ಪಟ್ಟಣಕ್ಕೆ ಪಂಚರಾತ್ರಿ ಹಳ್ಳಿಗೆ ಏಕರಾತ್ರಿ ಸಂಚರಿಸುತ್ತಾ ಇರುವ ಶಿವಯೋಗಿಯೇ ಚರ ಜಂಗಮ ಎನಿಸಿಕೊಳ್ಳುತ್ತಾನೆ. ಶಿವ ಸಾಕ್ಷಾತ್ಕಾರವನ್ನು ಪಡೆದು ಜ್ಞಾತೃ ಜ್ಞಾನ ಮತ್ತು ಜ್ಞೇಯ ಈ ಮೂರನ್ನೂ ಶಿವ ಸ್ವರೂಪವೆಂದು ಭಾವಿಸಿ ಜೀವನ್ಮುಕ್ತನಾದ ಶಿವಯೋಗಿಯೆ ಪರ ಜಂಗಮನೆಂದು ಕರೆಯಲ್ಪಡುತ್ತಾನೆ. ಜಂಗಮನಾದವನು ತನ್ನ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸಿದರೆ ಸಮಾಜದಲ್ಲಿ ಧರ್ಮದ ಪ್ರಚಾರ ಪ್ರಸಾರವಾಗುವುದುರ ಜೊತೆಗೆ ಜಗತ್ತಿನಲ್ಲಿ ಶಾಂತಿ ಸಮಾಧಾನಗಳು ನೆಲೆಸುತ್ತವೆ. ಈ ತರಹದ ಜಂಗಮನ ಕರ್ತವ್ಯದಲ್ಲಿ ಎಲ್ಲಾ ಶಿಷ್ಯ ಸದ್ಭಕ್ತರ ಸಹಕಾರವೂ ಅತ್ಯಗತ್ಯ ಎಂದು ವಿವರಿಸಿದರು. ಅಂಬಿಕಾ ನಗರದ ಈಶ್ವರ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ನೇತೃತ್ವವಹಿಸಿ ಧರ್ಮ ಸಂದೇಶ ನೀಡಿದರು. ಅಥರ್ಗಾದ ಶ್ರೀ ವಿರುಪಾಕ್ಷ ದೇವರು ಜಂಗಮದ ಮಹತ್ವವನ್ನು ಕುರಿತು ಪ್ರವಚನ ನೀಡಿದರು. ಯಡೂರಿನ ಶ್ರೀ ಸಿದ್ದಲಿಂಗೇಶ್ವರ ವೇದಾಗಮ ಸಂಸ್ಕೃತ ಪಾಠಶಾಲೆಯ ಪ್ರಾಚಾರ್ಯರಾದ ಶ್ರೀ ಶ್ರೀಶೈಲ ಶಾಸ್ತ್ರಿಗಳು ಘಟ ಸ್ಥಾಪನೆಯ ವಿಶೇಷತೆಯನ್ನು ಕುರಿತು ಮಾತನಾಡಿದರು. ಪಾಠಶಾಲೆಯ ವಿದ್ಯಾರ್ಥಿಗಳು ವೇದಘೋಷ ಮಾಡಿದರು. ಮಲ್ಲಯ್ಯ ಸ್ವಾಮಿಗಳು ನಿರೂಪಿಸಿದರು. ಇದೇ ಸಂದರ್ಭದಲ್ಲಿ ಗೋಕಾಕದ ಪ್ರಸಿದ್ಧ ಸಂಗೀತಗಾರರಾದ ಓಂಕಾರ ಕರಕಂಬಿ ಮತ್ತು ದಿನೇಶ್ ಜುಗುಳೆ ಇವರು ಸಂಗೀತ ನೀಡಿದರು. ©ಶ್ರೀಮದ್ ವೀರಶೈವ ಐಟಿ - ಸೆಲ್

+5 प्रतिक्रिया 0 कॉमेंट्स • 6 शेयर