+3 प्रतिक्रिया 0 कॉमेंट्स • 0 शेयर

ದೇಶೀ ಜಾನಪದ ಕಥೆ : ಅದ್ಭುತ ಉಡುಗೊರೆ ಒಂದಾನೊಂದು ಕಾಲದಲ್ಲಿ ಒಂದು ಅರಮನೆಯಿತ್ತು. ಆಗತಾನೆ ರಾಣಿ ಒಂದು ಸುಂದರ ಹೆಣ್ಣು ಮಗುವಿಗೆ ಜನ್ಮವಿತ್ತಿದ್ದಳು. ಅರಮನೆಯ ತುಂಬಾ ಸಡಗರದ ವಾತಾವರಣ. ಮಗುವನ್ನು ಕಂಡ ರಾಜ ""ಈ ಮಗು ಬಯಸಿದ್ದೆಲ್ಲಾ ಸಿಗುವಂತಾಗುತ್ತದೆ' ಎಂದರೆ, ಮಗುವನ್ನು ಮುದ್ದಾಡುತ್ತಾ ರಾಣಿಯು ""ನನ್ನ ಮಗಳು ಇಡೀ ಜಗತ್ತಿನಲ್ಲಿಯೇ ತುಂಬಾ ಸಂತೋಷದಲ್ಲಿರುವ ಮಗಳಾಗಿ ಬೆಳೆಯುತ್ತಾಳೆ' ಎನ್ನುತ್ತಾಳೆ. ಮಹಾರಾಜರ ಮಗಳಲ್ಲವೇ? ಆ ಮಗುವನ್ನು ರತ್ನದ ಗಂಟೆಗಳುಳ್ಳ ಬಂಗಾರದ ತೊಟ್ಟಿಲಲ್ಲಿಟ್ಟು ತೂಗುತ್ತಾರೆ. ಆದರೆ ಮಗು ಮಾತ್ರ ಅಳುತ್ತಲೇ ಇದೆ. ಅಳು, ಅಳು, ಅಳು... ಅರಮನೆಯ ಮೇಧಾವಿ ಮಂತ್ರಿಯೊಬ್ಬ ""ಮಗುವಿಗೊಂದು ಚಂದದ ಹೆಸರನ್ನಿಡಿ ಆಗ ಮಗು ಅಳುವುದನ್ನು ನಿಲ್ಲಿಸಬಹುದು' ಎಂಬ ಸಲಹೆ ನೀಡುತ್ತಾನೆ. ಅದರಂತೆಯೇ ರಾಜ ರಾಣಿಯರು ಹಲವಾರು ಪುಸ್ತಕಗಳನ್ನು ಪರಿಶೀಲಿಸಿ ಕಡೆಗೆ ಚಂದದ ಮುದ್ದಾದ ಮಗುವಿಗೆ ಚಂದ್ರಕಲಾ ಎಂಬ ಹೆಸರಿನೊಂದಿಗೆ ನಾಮಕರಣ ಮಾಡುತ್ತಾರೆ. ಮಗುವಿನ ಕೋಣೆಯನ್ನು ನಕ್ಷತ್ರಗಳಿಂದ ಸಿಂಗಾರಗೊಳಿಸ ಲಾಯಿತು. ಇಷ್ಟೆಲ್ಲಾ ಸಂಭ್ರಮದ ನಂತರವೂ ಮಗುವಿನ ಅಳುವೇ ನಿಲ್ಲಲಿಲ್ಲ. ಚಂದ್ರಕಲಾಳಿಗೆ ಒಂದು ವರ್ಷ ತುಂಬುತ್ತಾ ಬಂದರೂ ಅವಳ ಅಳು ಮಾತ್ರ ನಿಲ್ಲಲೇ ಇಲ್ಲ. ಇದರಿಂದ ಚಿಂತೆಗೊಳಗಾದ ರಾಜಮನೆತನ ದವರಿಗೆ ಮಂತ್ರಿ ಮತ್ತೂಂದು ಸಲಹೆಯನ್ನಿತ್ತ. ""ರಾಜಕುಮಾರಿಗೆ ಹುಟ್ಟುಹಬ್ಬ ಆಚರಿಸಿ ಅವಳಿಗೆ ಬಂದ ಉಡುಗೊರೆಗಳೊಂದಿಗೆ ಆಡುತ್ತಾ ಅವಳು ಅಳುವುದನ್ನು ನಿಲ್ಲಿಸುತ್ತಾಳೆ'. ಈ ಮಾತಿನಂತೆ ರಾಜನು ತನ್ನ ಎಲ್ಲಾ ಬಂಧುಬಾಂಧವರಿಗೆ, ದೇವಲೋಕದ ಯಕ್ಷ ಕಿನ್ನರರಿಗೂ ಹುಟ್ಟುಹಬ್ಬದ ಆಮಂತ್ರಣ ನೀಡುತ್ತಾನೆ. ರಾಣಿಯು ಚಂದ್ರಕಲಾಳಿಗಾಗಿ ನಕ್ಷತ್ರಗಳಿಂದ ಸಿಂಗಾರಗೊಂಡ ಕಡು ನೀಲಿ ಬಣ್ಣದ ಹೊಸ ಧಿರಿಸನ್ನು ತಯಾರಿಸುತ್ತಾಳೆ. ಹುಟ್ಟುಹಬ್ಬದ ಸಂಭ್ರಮದ ದಿನ. ಚಂದಿರನಂತೆ ಹೊಳೆಯುತ್ತಿದ್ದ ಚಂದ್ರಕಲಾ ಮೇಜಿನ ಮೇಲೆ ದೊಡ್ಡ ಕೇಕ್‌, ಕೇಕಿನ ಮೇಲೆಲ್ಲಾ ಸಕ್ಕರೆಯ ನಕ್ಷತ್ರಾಕಾರದ ಗೊಂಬೆಗಳು, ಮೇಲ್ಛಾವಣಿಗೆ ಬಣ್ಣ ಬಣ್ಣದ ಬಲೂನುಗಳು. ಅರಮನೆ ಚಂದ್ರಲೋಕದಂತೆ ಸಿಂಗಾರಗೊಂಡಿತ್ತು. ಹಾಗೂ ಉಡುಗೊರೆಗಳ ಮಹಾಪೂರವೇ ಆಗಿತ್ತು. ""ಈಗ ನಮ್ಮ ಮುದ್ದು ರಾಜಕುಮಾರಿ ನಗಬಹುದು, ಖುಷಿಯಾಗಬಹುದು' ಎಂದು ರಾಜರಾಣಿಯರು ಮಾತನಾಡಿಕೊಂಡರು. ಪುಟ್ಟಿ ಚಂದ್ರಕಲಾ ಕೆಲವು ಕ್ಷಣ ಆ ಕೇಕ್‌, ಬಲೂನ್‌ಗಳು ಮತ್ತು ಅವಳಿಗೆ ಬಂದ ಉಡುಗೊರೆಗಳನ್ನು ನೋಡಿದವಳೇ ಮತ್ತೆ ಅಳುವುದಕ್ಕೆ ಶುರುವಿಟ್ಟಳು. ಆ ಸಂಭ್ರಮಕ್ಕೆ ಬಂದಿದ್ದ ಯಕ್ಷಕಿನ್ನರರು ರಾಜಕುಮಾರಿಯ ಸಂತೋಷಕ್ಕಾಗಿ ಹಾರುವ ಕುದುರೆ, ಮಾತನಾಡುವ ಕನ್ನಡಿ, ಫ‌ಳಫ‌ಳನೆ ಹೊಳೆಯುವ ಕಿರೀಟ, ಮಾಂತ್ರಿಕ ಆಭರಣಗಳು ಹೀಗೆ ಹಲವಾರು ಉಡುಗೊರೆಗಳನ್ನು ನೀಡಿದರು. ಇದೆಲ್ಲವನ್ನು ಹೊಂದಿದ ಮೇಲಾದರೂ ಚಂದ್ರಕಲಾ ನಗುತ್ತಾಳೇನೋ ಎಂದು ಕಾಯುತ್ತಿದ್ದ ಎಲ್ಲರೂ ಅವಳ ರೋದನದಿಂದಾಗಿ ಚಿಂತೆಗೊಳಗಾದರು. ಹೀಗೆ ದಿನಗಳು ಕಳೆದವು. ರಾಜಕುಮಾರಿ ಚಂದ್ರಕಲಾಳು ಅರಮನೆಯಲ್ಲೇ ಇದ್ದು ಸಕಲ ವೈಭವಗಳನ್ನು ಹೊಂದಿದ್ದರೂ ಅವಳ ದುಃಖ ಮತ್ತು ಅಳು ನಿಲ್ಲಲೇ ಇಲ್ಲ. ಪ್ರತಿದಿನವೂ ಅವಳನ್ನು ನಗಿಸುವುದಕ್ಕಾಗಿ ವಿಕಟ ಕವಿಗಳು, ವಿದೂಷಕರು ಪ್ರಯತ್ನಿಸುತ್ತಿದ್ದರು. ರಾಜ ಮತ್ತು ರಾಣಿಯವರಿಗೂ ಇದೇ ಚಿಂತೆ. ಹೀಗೆ ಒಂದು ದಿನ ರಾಜಕುಮಾರಿ ಚಂದ್ರಕಲಾ ತನ್ನ ಕೊಠಡಿಯ ಕಿಟಕಿಯ ಬಳಿ ಕುಳಿತು ಅಳುತ್ತಿದ್ದಾಗ ಹೊರಗಿನಿಂದ ಹಾಡು ಗುನುಗುನಿಸುವ ಸಂತೋಷದ ಸ್ವರವು ಕೇಳಿಸಿತು. ತಾನು ಅಳುತ್ತಿರುವಾಗ ಸಂತೋಷದಿಂದ ಹಾಡುತ್ತಿರುವ ಆ ಹುಡುಗ ಯಾರು ಎಂದು ತಿಳಿಯಬೇಕೆಂದು ಬಂದು ತನ್ನ ತಂದೆಗೆ ಈ ವಿಷಯವನ್ನು ಹೇಳಿದಳು. ರಾಜಾಜ್ಞೆಯಂತೆ ರಾಜಭಟರು ಆ ಹುಡುಗನನ್ನು ಬಂಧಿಸಿ ಕರೆತಂದರು. ಆ ಹುಡುಗ ತೋಟದ ಮಾಲಿಯ ಮಗನಾಗಿದ್ದನು. ಅವನ ಬಟ್ಟೆಯೆಲ್ಲಾ ಮಣ್ಣಾಗಿದ್ದು, ಅಲ್ಲಲ್ಲಿ ಹರಿದು ಹೋಗಿದ್ದರೂ ಅವನ ಕಣ್ಣುಗಳಲ್ಲಿ ಆನಂದವು ನಕ್ಷತ್ರದಂತೆ ಮಿನುಗುತ್ತಿತ್ತು. ಅವನ ಸಂತೋಷವನ್ನು ನೋಡಿ ರಾಜಕುಮಾರಿಯು ""ಏಕೆ ನೀನು ಇಷ್ಟೊಂದು ಖುಷಿ ಆಗಿರುವೆ' ಎಂದು ಆ ಹುಡುಗನನ್ನು ಪ್ರಶ್ನಿಸಿದಳು. ""ಏಕೆಂದರೆ ಸೂರ್ಯನ ಉದಯದೊಂದಿಗೆ ನಾ ಬೆಳೆದ ಗಿಡದಿಂದ ಹೂವೊಂದು ಅರಳಿ ನಿಂತಿದೆ' ಎಂದನು ಆ ಮಾಲಿಯ ಮಗ. ರಾಜಕುಮಾರಿಗೆ ಅವನ ಮಾತಿನ ಅರ್ಥ ತಿಳಿಯಲಿಲ್ಲ. ಇಷ್ಟೊಂದು ವೈಭವಗಳಿದ್ದರೂ ನಾನು ದುಃಖೀಯಾಗಿರುವೆ. ನೀನು ಹೇಗೆ ಒಂದೇ ಒಂದು ಹೂವಿನಿಂದಾಗಿ ಸುಖವಾಗಿರುವೆ' ಎಂದು ಕೇಳಿದಳು. ""ಏಕೆಂದರೆ ನಿನ್ನ ಬಳಿ ಸಂತೋಷ ಎಂಬ ಉಡುಗೊರೆ ಇಲ್ಲ' ಎಂದನು ಆ ಹುಡುಗ. ""ಎಲ್ಲಿಂದ ನಾವು ಈ ಸಂತೋಷದ ಉಡುಗೊರೆಯನ್ನು ಪಡೆಯಬಹುದು' ಎಂದು ರಾಜರಾಣಿಯರು ಅತ್ಯಾಶ್ಚರ್ಯಗಳಿಂದ ಆ ಹುಡುಗನನ್ನು ಪ್ರಶ್ನಿಸಿದರು. ""ರಾಜಕುಮಾರಿಯು ಅದನ್ನು ತನ್ನಲ್ಲೇ ಕಂಡುಕೊಳ್ಳಬಹುದು' ಎಂದನು ಅವನು. ಚಂದ್ರಕಲಾಳನ್ನು ಅರಮನೆಯಿಂದ ತೋಟಕ್ಕೆ ಕರೆದುಕೊಂಡು ಹೋದ. ಆ ಹುಡುಗ ಅವಳಿಗೆ ಮಣ್ಣನ್ನು ಅಗೆದು ಬೀಜ ಬಿತ್ತುವುದನ್ನು ಹೇಳಿಕೊಟ್ಟ . ಆ ಹುಡುಗನೊಂದಿಗೆ ಸೇರಿ ರಾಜಕುಮಾರಿಯು ಹಲವಾರು ಬೀಜಗಳನ್ನು ಬಿತ್ತಿದಳು. ಹಲವಾರು ವಾರಗಳನ್ನು ಅವಳು ಆ ಹುಡುಗನೊಂದಿಗೆ ಆಡುತ್ತಾ ಚಿಗುರೊಡೆದ ಸಸಿಗಳಿಗೆ ನೀರನ್ನು ಹಾಕುತ್ತಾ, ಆ ಹುಡುಗ ಗುನುಗುತ್ತಿದ್ದ ಹಳ್ಳಿ ಹಾಡುಗಳನ್ನು ತಾನೂ ಹಾಡುತ್ತಾ ತೋಟದಲ್ಲೇ ಹೆಚ್ಚು ಸಮಯ ಕಳೆದಳು. ಒಂದು ದಿನ ರಾಜಕುಮಾರಿ ಚಂದ್ರಕಲಾ ಅರಮನೆಯ ಒಳಗೆ ಪುಟಿಪುಟಿದು ನಲಿಯುತ್ತಾ ಬಂದಳು. ಅವಳ ಬಟ್ಟೆಯೆಲ್ಲಾ ಮಣ್ಣಿನಿಂದಾಗಿ ಕೊಳೆಯಾಗಿತ್ತು. ಆದರೆ, ಅವಳು ಕಿಲಕಿಲನೆ ನಗುತ್ತಿದ್ದಳು ಮತ್ತು ಅವಳ ಕೈಯಲ್ಲಿ ಅವಳೇ ಬೆಳೆಸಿದ ಗಿಡಗಳಿಂದ ಕೊಯ್ದ ಬಗೆ ಬಗೆಯ ಹೂಗಳಿದ್ದವು. ಇದನ್ನು ನೋಡಿದ ರಾಜ ರಾಣಿಯರು ತುಂಬಾ ಸಂಭ್ರಮಪಟ್ಟರು. ರಾಜಕುಮಾರಿಯು ಅಂದಿನಿಂದ ಸಂತೋಷದಿಂದಿರತೊಡಗಿದಳು. ಅವಳಿಗೆ ಸಂತೋಷ ಎಂಬ ಉಡುಗೊರೆ ಲಭಿಸಿತ್ತು.. https://goo.gl/rvpQps

+3 प्रतिक्रिया 0 कॉमेंट्स • 0 शेयर

+14 प्रतिक्रिया 0 कॉमेंट्स • 0 शेयर

+3 प्रतिक्रिया 0 कॉमेंट्स • 2 शेयर

+3 प्रतिक्रिया 0 कॉमेंट्स • 1 शेयर

+12 प्रतिक्रिया 1 कॉमेंट्स • 1 शेयर

+5 प्रतिक्रिया 0 कॉमेंट्स • 0 शेयर

+2 प्रतिक्रिया 0 कॉमेंट्स • 0 शेयर