mohankumar Mar 23, 2019

ನೀ ಮಾಯೆಯೊಳಗೊ ನಿನ್ನೊಳು ಮಾಯೆಯೊ||2|| ನೀ ದೇಹದೊಳಗೊ ನಿನ್ನೊಳು ದೇಹವೊ ||ನೀ ಮಾಯೆಯೊಳಗೊ|| ಬಯಲು ಆಲಯದೊಳಗೊ ಆಲಯವು ಬಯಲೊಳಗೊ||ಬಯಲು|| ಬಯಲು ಆಲಯವೆರಡು ನಯನದೊಳಗೊ...ನಯನದೊಳಗೋ. ... ನಯನ ಬುದ್ಧಿಯೊಳಗೊ ಬುದ್ಧಿ ನಯನದೊಳಗೊ||ನಯನ|| ನಯನ ಬುದ್ಧಿಗಳೆರಡು ನಿನ್ನೊಳಗೊ ಕ್ರಷ್ಣಾ || ನೀ ಮಾಯೆಯೊಳಗೊ || ಸವಿಯು ಸಕ್ಕರೆಯೊಳಗೊ ಸಕ್ಕರೆಯು ಸವಿಯೊಳಗೊ||ಸವಿಯು|| ಸವಿಯು ಸಕ್ಕರೆಗಳೆರಡು ಜಿಹ್ವೆಯೊಳಗೊ... ಜಿಹ್ವೆಯೊಳಗೆ.... ಜಿಹ್ವೆ ಮನಸಿನೊಳಗೊ ಮನಸು ಜಿಹ್ವೆಯೊಳಗೊ||ಜಿಹ್ವೆ|| ಜಿಹ್ವೆ ಮನಸುಗಳೆರಡು ನಿನ್ನೊಳಗೊ ಕ್ರಷ್ಣಾ ||ನೀ ಮಾಯೆಯೊಳಗೊ|| ಕುಸುಮದೊಳು ಗಂಧವೊ ಗಂಧದೊಳು ಕುಸುಮವೊ||ಕುಸುಷ|| ಕುಸುಮ ಗಂಧಗಳೆರಡು ಆಘ್ರಾಣದೊಳಗೊ... ಆಘ್ರಾಣದೊಳಗೊ... ಅಸಮಭವ ಕಾಗಿನೆಲೆಯಾದಿಕೇಶವರಾಯ||2|| ಉಸುರಲೆನ್ನಳವಲ್ಲ ಎಲ್ಲ ನಿನ್ನೊಳಗೊ || ನೀ ಮಾಯೆಯೊಳಗೊ||

0 कॉमेंट्स • 0 शेयर
mohankumar Mar 23, 2019

+32 प्रतिक्रिया 2 कॉमेंट्स • 3 शेयर
mohankumar Mar 23, 2019

+21 प्रतिक्रिया 1 कॉमेंट्स • 5 शेयर