ಜ್ಞಾನಾಮೃತ

+3 प्रतिक्रिया 0 कॉमेंट्स • 1 शेयर

*ಸ್ವಾತಂತ್ಯ್ರ ಕಿಡಿಯ ಹುಟ್ಟುಹಬ್ಬ ಇವತ್ತು...!!!* 🚩🚩🚩🚩🚩 ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆಯ ದಿನ ನಿಗದಿಗೊಂಡಿತ್ತು. ಸುಭಾಷ್ ತಾವು ಸ್ಪರ್ಧಿಸುವುದಾಗಿ ಘೋಷಿಸಿದ್ದರು. ಈ ನಿರ್ಧಾರದಿಂದ ಗಾಂಧಿಜಿ ಅಸಮಾಧಾನ ಗೊಂಡಿದ್ದರು. ಕಾಂಗ್ರೆಸ್ ಸಂಪ್ರದಾಯವೇ ಹಾಗೆನೋ.. ಅಲ್ಲಿಯವರೆಗೆ ಗಾಂಧಿಜಿ ಯಾರನ್ನು ಸೂಚಿಸುತ್ತಾರೋ ಅವರು ಅಧ್ಯಕ್ಷರಾಗುವುದು ಪದ್ಧತಿ. ಚುನಾವಣೆ ಅನ್ನುವುದು ನೆಪ ಅಷ್ಟೇ. ಯಾರೂ ಅದನ್ನು ವಿರೋಧಿಸುತ್ತಿರಲಿಲ್ಲ, ವಿರೋಧಿಸುವ ಹಾಗೂ ಇರಲಿಲ್ಲ. ಅವರ ತೀರ್ಮಾನವೇ ಅಂತಿಮ ಹೊರತು ಉಳಿದವರ ಅಭಿಪ್ರಾಯಕ್ಕಲ್ಲ. ಈ ಗುಲಾಮಿ ಮನಸ್ಥಿತಿಯನ್ನು, ಜೀ ಹುಜೂರ್ ಪದ್ದತಿಯನ್ನು ವಿರೋಧಿಸಿ ಸುಭಾಷ್ ಚುನಾವಣೆ ನಡೆಯಲಿ ನಾನು ಸ್ಪರ್ಧಿಸುತ್ತೇನೆ ಎಂದಿದ್ದರು. ಗಾಂಧೀಜಿಯನ್ನು ಒಳಗೊಂಡ ಕಾರ್ಯಕಾರಿಣಿ ಪಟ್ಟಾಭಿ ಸೀತಾರಾಮಯ್ಯ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಸೂಚಿಸಿತು. ಹೇಗಿದ್ದರೂ ಕಾರ್ಯಕಾರಿಣಿಯ ಸೂಚನೆಗೆ ಎದುರಾಡುವವರು ಯಾರೂ ಇಲ್ಲ ಸುಭಾಷ್ ಮುಖಭಂಗ ಅನುಭವಿಸುತ್ತಾರೆ ಎಂದು ತಿಳಿದಿದ್ದರೆನೋ.. ಮೇಲ್ನೋಟಕ್ಕೆ ಅದು ಪಟ್ಟಾಭಿ ಹಾಗೂ ಸುಭಾಷ್ ನಡುವಿನ ಕದನ ಎಂದಾದರೂ ವಾಸ್ತವದಲ್ಲಿ ಅದು ಗಾಂಧೀಜಿ ಹಾಗೂ ಸುಭಾಷ್ ನಡುವಿನ ಹಣಾಹಣಿ ಎಂದು ಇಡೀ ದೇಶವೇ ತಿಳಿದಿತ್ತು. ಚುನಾವಣೆ ನಡೆದು ಮತ ಎಣಿಕೆ ಮುಗಿದಾಗ ಪಟ್ಟಾಬಿ 1375 ಮತ ಪಡೆದರೆ ಸುಭಾಷ್ 1580 ಮತ ಪಡೆದಿದ್ದರು. ದೇಶ ಜೀ ಹುಜೂರ್ ಪದ್ದತಿಯಿಂದ ಹೊರಬರುವುದರಲ್ಲಿತ್ತು. ಇದು ತನಗಾದ ಅವಮಾನ ಎಂದೇ ಭಾವಿಸಿದ ಗಾಂಧೀ ಸುಮ್ಮನಿರಲಿಲ್ಲ.. ಅವರಿಗೆ ಮಾನಸಿಕ ಹಿಂಸೆ, ಅವಮಾನ, ಟೀಕೆ ಮಾಡಿ ಅವರು ರಾಜಿನಾಮೆ ನೀಡುವ ಹಾಗೆ ಮಾಡುವುದರಲ್ಲಿ ಸಫಲರಾಗಿ ಗೆದ್ದೇ ಎಂದು ಬೀಗಿದರು. ಸುಭಾಷ್ ಬದುಕು ಹಲವು ತಿರುವುಗಳನ್ನು ಪಡೆದುಕೊಂಡು ಬ್ರಿಟಿಷರಿಗೆ ಸಿಂಹಸ್ವಪ್ನವಾದರು. ಕೊನೆಯ ತನಕ ಸ್ವಾತಂತ್ರ್ಯಕ್ಕಾಗಿ ಹೋರಾಡಿದರೆ ಹೊರತು ಗುಲಾಮರಾಗಲಿಲ್ಲ.. ತುಳಿದಷ್ಟು ಮೇಲಕ್ಕೆ ಎದ್ದರು. ಇವತ್ತು ಯುವಜನತೆಯ ಹೃದಯದಲ್ಲಿ ವಿರಾಜಮಾನರಾದರು. ಅಂತ ಸ್ವಾತಂತ್ಯ್ರ ಕಿಡಿಯ ಹುಟ್ಟುಹಬ್ಬ ಇವತ್ತು. ಆ ಕಿಡಿ ಇನ್ನೂ ದೇಶಭಕ್ತಿಯ ದೀಪ ಹೊತ್ತಿಸುತ್ತಾ ಉಳಿದಿರುವುದು ಸೋಜಿಗ.. ಈ ಕಿಡಿ ಚಿರಾಯುವಾಗಿರಲಿ.... ಹುಟ್ಟು ಹಬ್ಬದ ಶುಭಾಶಯಗಳು *ಸುಭಾಷ್...* ನಿಮ್ಮ ನೆನಪು ಸದಾ ಜೀವಂತ. *ಶೋಭರಾವ್* (ಸಂಗ್ರಹಿಸಿದ್ದು) ನಮೋ ಹಿಂದೂ ಸನಾತನ ಧರ್ಮ, ಜೈ ಹಿಂದ್🌺 !!!!Jai HINDUTWA!!!🚩🚩🚩

+3 प्रतिक्रिया 0 कॉमेंट्स • 0 शेयर

+12 प्रतिक्रिया 1 कॉमेंट्स • 0 शेयर