ಬನ್ನಿ ವೃಕ್ಷದ ಮಹತ್ವ...🌹🙏 ಶಮಿ ವೃಕ್ಷವನ್ನು ದೇವ ವೃಕ್ಷ, ಸುವರ್ಣ ವೃಕ್ಷ ಮುಂತಾಗಿ ಕರೆಯಲು ಪುರಾಣಗಳ ಪ್ರಕಾರ ಒಂದು ಸ್ವಾರಸ್ಯಕರವಾದ ವೃತ್ತಾಂತ ಇದೆ. ಅನೇಕ ಶತಮಾನಗಳ ಹಿಂದೆ,ಮಕ್ಕಳು ವಿದ್ಯಾರ್ಜನೆ ಮಾಡಲು ಗುರುಕುಲಗಳಲ್ಲಿ ಸೇರಿ ವಿದ್ಯಾಭ್ಯಾಸ ಮುಗಿದ ನಂತರ,ಗುರುಕುಲವನ್ನು ಬಿಡುವ ಮುನ್ನ,ಯೋಗ್ಯತೆಗೆ ತಕ್ಕಂತೆ ಗುರು ದಕ್ಷಿಣೆ ಕೊಡುವುದು ಮಾನವೀಯತೆಯಾಗಿತ್ತು. ಈ ರೀತಿಯಾಗಿ, ಕೌಸ್ತೆಯನೆಂಬ ಒಬ್ಬ ಶಿಶ್ಯ ಗುರುವೊಬ್ಬರ ಅಡಿ ವಿದ್ಯಾಭ್ಯಾಸವನ್ನು ಪೂರ್ಣಮಾಡಿ ಗುರುಕುಲ ಬಿಟ್ಟು ಹೋಗುವ ಸಮಯ ಬಂದಿತು. ಕೌಸ್ಥೆಯನು ಒಂದು ದಿನ ಗುರುಗಳಲ್ಲಿ ಬಂದು, ಗುರು ದಕ್ಷಿಣೆಯಾಗಿ,ಏನು ನೀಡಲೆಂದು, ಬಿನ್ನವಿಸಿಕೊಳ್ಳಲು,ಇವನು ಬಡವನೆಂದು ಗುರುಗಳು ಮೊದಲೇ ಅರಿತಿದ್ದುದರಿಂದ, ನನಗೆ ಯಾವ ಗುರು ದಕ್ಷಿಣೆಯು ಬೇಕಿಲ್ಲ,ನಿನ್ನಿಂದ ಏನೂ ಪಡೆಯಲು ಬಯಸುವುದಿಲ್ಲ,ನಿನ್ನ ವಿದ್ಯಾಭ್ಯಾಸ ಮುಗಿದಿದೆ. ನೀನು ಆಶ್ರಮದಿಂದ ಹೊರಡಬಹುದು' ಎಂದು ಆಜ್ಞಾಪಿಸಿದರು.ಗುರುಗಳ ಮಾರ್ಗದರ್ಶನದಲ್ಲಿ ಅನೇಕ ವರ್ಷಗಳು ಓದಿದ ಶಿಷ್ಯನಿಗೆ ಗುರು ದಕ್ಷಿಣೆ ಕೊಡದೆ ಆಶ್ರಮವನ್ನು ಬಿಡುವುದು ಸರಿಯಲ್ಲವೆಂದು ಯೋಚಿಸಿ ಪುನಃ ಗುರುಗಳಲ್ಲಿ ಕೊಡಬೇಕಾದ ಗುರು ದಕ್ಷೆಯನ್ನು ತಿಳಿಸುವಂತೆ ಅತಿ ವಿನಯದಿಂದ ಪ್ರಾರ್ಥಿಸಿಕೊಂಡನು. ಎಷ್ಟು ಹೇಳಿದರೂ ಕೇಳದ ಶಿಷ್ಯನ ಬಗ್ಗೆ ಬೇಸರಗೊಂಡು ಮುಂಗೋಪಿಯಾದ ಗುರುವು ಒಮ್ಮೆಲೇ ಶಿಷ್ಯನ ಮೇಲೆ ಕೋಪಗೊಂಡು, ನೀನು ನನಗೆ ಗುರುದಕ್ಷಿಣೆ ಎಂಬುದನ್ನೇ ಕೊಡಬೇಕೆಂದಿದ್ದರೆ, ನನಗೆ ಹತ್ತು ಲಕ್ಷ ಸುವರ್ಣ ನಾಣ್ಯಗಳನ್ನು ಗುರುದಕ್ಷಿಣೆಯಾಗಿ ತಂದು ಕೊಡುವಂತೆ ಆಜ್ಞಾಪಿಸದನು ,ಬಡತನದ ಬೇಗೆಯಲ್ಲಿ ಬೆಂದಿದ್ದ ಶಿಷ್ಯನು, ಗುರುಗಳು ಕೇಳಿದ ಹತ್ತು ಲಕ್ಷ ಚಿನ್ನದ ನಾಣ್ಯಗಳನ್ನು ಎಲ್ಲಿಂದ ತಂದು ಕೊಡಲಿ ಎಂದು ಚಿಂತಾಕ್ರಾಂತನಾದನು..ಸೂರ್ಯ ವಂಶದ ರಾಜರು ಅಳುತ್ತಿದ್ದ ಕಾಲ. ದಾನ ಧರ್ಮಗಳಲ್ಲಿ ಹೆಸರು ಪಡೆದಿದ್ದ ಮಹಾರಾಜರಿಂದ ಏನಾದರೂ ಪರಿಹಾರ ದೊರಕಬಹುದೆಂದು ನಗರಕ್ಕೆ ಬಂದು ಕೌಸ್ಥೆಯನು ಪ್ರತಿದಿನವೂ ಅರಮನೆಗೆ ಬಂದು ಹೋಗುತ್ತಿದ್ದ.ಇವನನ್ನು ಅನೇಕ ಬಾರಿ ನೋಡಿದ್ದ ರಾಜನು ಕುತೂಹಲಗೊಂಡು ಒಂದು ದಿನ ಈ ಹುಡುಗನನ್ನ ತನ್ನಲ್ಲಿಗೆ ಕರೆಸಿ,ಅರಮನೆಗೆ ಪ್ರತಿದಿನ ಬಂದು ಹೋಗುವ ಕಾರಣವನ್ನು ಕೇಳಿದನು.ಕೌಸ್ತೆಯನು ನಡೆದ ಎಲ್ಲಾ ಸಂಗತಿಯನ್ನು ಹೇಳಿ ಗುರುವಿನ ಬೇಡಿಕೆಯನ್ನು ತೀರಿಸಲು ಸಹಾಯ ಮಾಡುವಂತೆ ಯಾಚಿಸಿದನು.ಹುಡುಗನಿಂದ ಎಲ್ಲಾ ವಿಷಯಗಳು ತಿಳಿದ ನಂತರ ಹುಡುಗನಿಗೆ ಬೇಕಾಗಿರುವ ಹಣ ಒಂದು ಒಳ್ಳೆಯ ಉದ್ದೇಶಕ್ಕಾಗಿಯೇ ಎಂದು ಯೋಚಿಸಿ ಸಹಾಯ ಮಾಡುವ ಸಲುವಾಗಿ ತನ್ನ ರಾಜ್ಯದಲ್ಲಿ ದೊರೆಯುವ ಸಂಪತ್ತು ಎಷ್ಟಿರಬಹುದೆಂದು ವಿಚಾರಿಸಿದ ಮೇಲೆ, ಆ ಹಣವು ಸಾಲದು ಎಂದು ಮನವರಿಕೆಯಾಯಿತು.ಪ್ರಜೆಗಳಿಂದ ಈಗಾಗಲೇ ತೆರಿಗೆ ಬಾಕಿಗಳು ಎಲ್ಲಾ ವಸೂಲಿಯಾಗಿದೆ. ಏನು ಮಾಡಬೇಕೆಂಬುದೇ ತೋಚದಾಯಿತು.ಕೊನೆಗೆ ಸಂಪತ್ತಿನ ಸರ್ವಾಧಿಕಾರಿಯಾದ, ಕುಬೇರನ ಮೇಲೆ ಯುದ್ಧಕ್ಕೆ ಹೊರಡಲು ಸೈನ್ಯ ಸಮೇತ ಸಿದ್ಧನಾಗಿ ಅರಮನೆಯನ್ನು ಬಿಟ್ಟನು.ರಾಜ ಮತ್ತು ಸೈನಿಕರು ಸಂಜೆಯ ವೇಳೆಗೆ, ಒಂದು ವನದ ಬಳಿ ಬಂದರು, ರಾತ್ರಿ ಅಲ್ಲಿಯೇ ಕಳೆಯಬೇಕಾಯಿತು. ಆ ವನವೆಲ್ಲ ಶಮಿ ವೃಕ್ಷಗಳಿಂದ ತುಂಬಿತ್ತು.ಇತ್ತ ಕುಬೇರನಿಗೆ, ಸೂರ್ಯ ವಂಶದ ರಾಜನು ತನ್ನ ಮೇಲೆ ಕೇವಲ ಸಂಪತ್ತಿಗಾಗಿ ಯುದ್ಧಕ್ಕೆ ಬರುತ್ತಿರುವ ಕಾರಣವು ತನ್ನ ದಿವ್ಯ ದೃಷ್ಟಿಯಿಂದ ತಿಳಿಯಿತು.ಇಂತಹ ರಾಜನೊಂದಿಗೆ ಯುದ್ಧವು ಸಲ್ಲದೆಂದು ಬಗೆದು, ರಾಜನು ತಂಗಿದ್ದ ವನದಲ್ಲಿ ಇರುವ ಶಮಿ ವೃಕ್ಷಗಳ ಪ್ರತಿಯೊಂದು ಎಲೆಯು ಸುವರ್ಣ ನಾಣ್ಯಗಳಿಂದ ಸೂಸುವಂತೆ ತನ್ನ ಮಾಯೆಯಿಂದ ಉಂಟುಮಾಡಿದನು. ಎಂದಿನಂತೆ ಬೆಳಗಾಯಿತು, ಕುಬೇರನ ಮೇಲೆ ಯುದ್ಧ ಮಾಡಲು,ವನದಲ್ಲಿ ಸೈನಿಕರೊಂದಿಗೆ ತಂಗಿದ್ದ ರಾಜನು ಪ್ರಯಾಣ ಮುಂದುವರಿಸಲು ಸಜ್ಜಾದನು. ಶಮಿ ವೃಕ್ಷದ ಪ್ರತಿಯೊಂದು ಎಲೆಯು ಸೂರ್ಯನ ಬೆಳಕಿನಲ್ಲಿ ಸುವರ್ಣ ನಾಣ್ಯವಾಗಿ ಹೊಳೆಯುತ್ತಿರುವುದನ್ನು ಗಮನಿಸಿ ಕುಬೇರನೊಂದಿಗೆ ಯುದ್ಧವನ್ನು ರದ್ದು ಮಾಡಿ, ತನಗೆ ಬೇಕಾದ ಸಂಪತ್ತು ಶಮಿ ವೃಕ್ಷದಿಂದಲೇ ಸಿಕ್ಕಿತೆಂದು ಸಂತೋಷಪಟ್ಟು, ಸಂಪತ್ತಿನ ಸಮೇತ ರಾಜಧಾನಿಗೆ ಹೋಗಿ, ಗುರುಗಳು ಕೇಳಿದ ಸುವರ್ಣ ನಾಣ್ಯಗಳನ್ನು ಹುಡಗನಿಗೆ ಕೊಟ್ಟು ತನ್ನ ವಂಶದ ಕೀರ್ತಿಯನ್ನು ಉಳಿಸಿಕೊಂಡನು.ಇತ್ತ ಶಿಷ್ಯನಿಂದ ಸ್ವೀಕರಿಸಿದ ಅಷ್ಟು ದೊಡ್ಡ ಮೊತ್ತದ ಗುರುದಕ್ಷಿಣೆಯನ್ನು ಕೊಡಲು ಕಾರಣನಾದ ಆ ರಾಜನ ಸಹೃದಯತೆ ಮತ್ತು ವಿಶಾಲ ಮನೋಭಾವನೆಗಳನ್ನು ಗುರುವು ಕೊಂಡಾಡಿದನು.ಬರಿದಾದ ರಾಜ್ಯ ಕೋಶವನ್ನು ಸಂಪತ್ತಿನಿಂದ ತುಂಬಿ ತುಳುಕುವಂತೆ ಮಾಡಿ, ಪುನಃ ರಾಜ್ಯವನ್ನು ಸಂಪದ್ಭರಿತವಾಗುವಂತೆ ಮಾಡಿದನು. ಇಂತಹ ಮಹಾ ಮಹಿಮೆಯುಳ್ಳ ಶಮಿ ವೃಕ್ಷದ ಎಲೆಗಳನ್ನು ಇಂದು ವಿನಿಮಯ ಮಾಡಿಕೊಂಡು ಮನೆಗಳಲ್ಲಿ ಇರಿಸಿಕೊಂಡರೆ ಕೈಗೂಳ್ಳುವ ಎಲ್ಲಾ ಕಾರ್ಯಗಳು ಯಶಸ್ವಿಯಾಗುವುದು.ಮನೆಯು ಸಂಪತ್ಪರಿತವಾಗುವುದೆಂದು ಸಹಾ ಹೇಳಲಾಗಿದೆ.ಅಂದು ಮಹಾರಾಜನು ವನದಲ್ಲಿದ್ದಾಗ, ಶಮೀವಕ್ಷದ ಪ್ರತಿಯೊಂದು ಎಲೆಯು ಸುವರ್ಣಮಯವಾದ ದಿನವೇ ಆಶ್ವಯುಜ ಮಾಸ, ಶುಕ್ಲಪಕ್ಷದ ದಶಮಿ. ಆದ್ದರಿಂದ ಇಂದು ಈ ವೃಕ್ಷಕ್ಕೆ ಭಕ್ತಿಯಿಂದ ಪೂಜೆ ಮಾಡಿ, ಅದರ ಎಲೆಗಳನ್ನು ಮನೆಗೆ ತಂದು ಅಕ್ಕ ಪಕ್ಕದವರಿಗೆ ಕೊಟ್ಟು ಅವರಿಗೆ ಶುಭ ಹಾರೈಸಿ,ಎಲೆಗಳನ್ನು ಅರಾ, ಆಭರಣಗಳ ಪೆಟ್ಟಿಗೆಯಲ್ಲಿಟ್ಟರೆ, ಇರುವ ಸಂಪತ್ತು ವೃದ್ಧಿಯಾಗುವುದೆಂದು ನಂಬಿಕೆ, ಶಮೀ ಶಮಯತೇ ಪಾಪಂ ಶಮೀ ಶತ್ರು ವಿನಾಶಿನೀ ಅರ್ಜುನಸ್ಯ ಧನುರ್ಧಾರೀ ರಾಮಸ್ಯ ಪ್ರಿಯದರ್ಶಿನೀ ಎಂಬಂತೆ ಬನ್ನಿ ಮರದ ಎಲೆಗಳು, ಪಾಪಗಳನ್ನು ಶತ್ರುಗಳನ್ನು ನಾಶ ಮಾಡುವುದರಿಂದ ,ಬನ್ನಿ ಎಲೆಗಳ ವಿನಿಮಯದೊಂದಿಗೆ ಸಂಪತು ಸುಖ ಶಾಂತಿಗಳನ್ನು ವೃದ್ಧಿಸಿಕೊಂಡು ಬಾಳೋಣ.

ಬನ್ನಿ ವೃಕ್ಷದ ಮಹತ್ವ...🌹🙏

ಶಮಿ ವೃಕ್ಷವನ್ನು ದೇವ ವೃಕ್ಷ, ಸುವರ್ಣ ವೃಕ್ಷ ಮುಂತಾಗಿ ಕರೆಯಲು ಪುರಾಣಗಳ ಪ್ರಕಾರ ಒಂದು ಸ್ವಾರಸ್ಯಕರವಾದ ವೃತ್ತಾಂತ ಇದೆ. ಅನೇಕ ಶತಮಾನಗಳ ಹಿಂದೆ,ಮಕ್ಕಳು ವಿದ್ಯಾರ್ಜನೆ ಮಾಡಲು ಗುರುಕುಲಗಳಲ್ಲಿ ಸೇರಿ ವಿದ್ಯಾಭ್ಯಾಸ ಮುಗಿದ ನಂತರ,ಗುರುಕುಲವನ್ನು ಬಿಡುವ ಮುನ್ನ,ಯೋಗ್ಯತೆಗೆ ತಕ್ಕಂತೆ ಗುರು ದಕ್ಷಿಣೆ ಕೊಡುವುದು ಮಾನವೀಯತೆಯಾಗಿತ್ತು. ಈ ರೀತಿಯಾಗಿ, ಕೌಸ್ತೆಯನೆಂಬ ಒಬ್ಬ ಶಿಶ್ಯ ಗುರುವೊಬ್ಬರ ಅಡಿ ವಿದ್ಯಾಭ್ಯಾಸವನ್ನು ಪೂರ್ಣಮಾಡಿ ಗುರುಕುಲ ಬಿಟ್ಟು ಹೋಗುವ ಸಮಯ ಬಂದಿತು. ಕೌಸ್ಥೆಯನು ಒಂದು ದಿನ ಗುರುಗಳಲ್ಲಿ ಬಂದು, ಗುರು ದಕ್ಷಿಣೆಯಾಗಿ,ಏನು ನೀಡಲೆಂದು, ಬಿನ್ನವಿಸಿಕೊಳ್ಳಲು,ಇವನು ಬಡವನೆಂದು ಗುರುಗಳು ಮೊದಲೇ ಅರಿತಿದ್ದುದರಿಂದ,

ನನಗೆ ಯಾವ ಗುರು ದಕ್ಷಿಣೆಯು ಬೇಕಿಲ್ಲ,ನಿನ್ನಿಂದ ಏನೂ ಪಡೆಯಲು ಬಯಸುವುದಿಲ್ಲ,ನಿನ್ನ ವಿದ್ಯಾಭ್ಯಾಸ ಮುಗಿದಿದೆ. ನೀನು ಆಶ್ರಮದಿಂದ ಹೊರಡಬಹುದು' ಎಂದು ಆಜ್ಞಾಪಿಸಿದರು.ಗುರುಗಳ ಮಾರ್ಗದರ್ಶನದಲ್ಲಿ ಅನೇಕ ವರ್ಷಗಳು ಓದಿದ ಶಿಷ್ಯನಿಗೆ ಗುರು ದಕ್ಷಿಣೆ ಕೊಡದೆ ಆಶ್ರಮವನ್ನು ಬಿಡುವುದು ಸರಿಯಲ್ಲವೆಂದು ಯೋಚಿಸಿ ಪುನಃ ಗುರುಗಳಲ್ಲಿ ಕೊಡಬೇಕಾದ ಗುರು ದಕ್ಷೆಯನ್ನು ತಿಳಿಸುವಂತೆ ಅತಿ ವಿನಯದಿಂದ ಪ್ರಾರ್ಥಿಸಿಕೊಂಡನು. ಎಷ್ಟು ಹೇಳಿದರೂ ಕೇಳದ ಶಿಷ್ಯನ ಬಗ್ಗೆ ಬೇಸರಗೊಂಡು ಮುಂಗೋಪಿಯಾದ ಗುರುವು ಒಮ್ಮೆಲೇ ಶಿಷ್ಯನ ಮೇಲೆ ಕೋಪಗೊಂಡು, ನೀನು ನನಗೆ ಗುರುದಕ್ಷಿಣೆ ಎಂಬುದನ್ನೇ ಕೊಡಬೇಕೆಂದಿದ್ದರೆ, ನನಗೆ ಹತ್ತು ಲಕ್ಷ ಸುವರ್ಣ ನಾಣ್ಯಗಳನ್ನು ಗುರುದಕ್ಷಿಣೆಯಾಗಿ ತಂದು ಕೊಡುವಂತೆ ಆಜ್ಞಾಪಿಸದನು ,ಬಡತನದ ಬೇಗೆಯಲ್ಲಿ ಬೆಂದಿದ್ದ ಶಿಷ್ಯನು, ಗುರುಗಳು ಕೇಳಿದ ಹತ್ತು ಲಕ್ಷ ಚಿನ್ನದ ನಾಣ್ಯಗಳನ್ನು ಎಲ್ಲಿಂದ ತಂದು ಕೊಡಲಿ ಎಂದು ಚಿಂತಾಕ್ರಾಂತನಾದನು..ಸೂರ್ಯ ವಂಶದ ರಾಜರು ಅಳುತ್ತಿದ್ದ ಕಾಲ. ದಾನ ಧರ್ಮಗಳಲ್ಲಿ ಹೆಸರು 
ಪಡೆದಿದ್ದ ಮಹಾರಾಜರಿಂದ ಏನಾದರೂ ಪರಿಹಾರ ದೊರಕಬಹುದೆಂದು ನಗರಕ್ಕೆ ಬಂದು ಕೌಸ್ಥೆಯನು ಪ್ರತಿದಿನವೂ ಅರಮನೆಗೆ ಬಂದು

ಹೋಗುತ್ತಿದ್ದ.ಇವನನ್ನು ಅನೇಕ ಬಾರಿ ನೋಡಿದ್ದ ರಾಜನು ಕುತೂಹಲಗೊಂಡು ಒಂದು ದಿನ ಈ ಹುಡುಗನನ್ನ ತನ್ನಲ್ಲಿಗೆ ಕರೆಸಿ,ಅರಮನೆಗೆ ಪ್ರತಿದಿನ ಬಂದು ಹೋಗುವ ಕಾರಣವನ್ನು ಕೇಳಿದನು.ಕೌಸ್ತೆಯನು ನಡೆದ ಎಲ್ಲಾ ಸಂಗತಿಯನ್ನು ಹೇಳಿ ಗುರುವಿನ ಬೇಡಿಕೆಯನ್ನು ತೀರಿಸಲು ಸಹಾಯ ಮಾಡುವಂತೆ ಯಾಚಿಸಿದನು.ಹುಡುಗನಿಂದ ಎಲ್ಲಾ ವಿಷಯಗಳು ತಿಳಿದ ನಂತರ ಹುಡುಗನಿಗೆ ಬೇಕಾಗಿರುವ ಹಣ ಒಂದು ಒಳ್ಳೆಯ ಉದ್ದೇಶಕ್ಕಾಗಿಯೇ ಎಂದು ಯೋಚಿಸಿ ಸಹಾಯ ಮಾಡುವ ಸಲುವಾಗಿ ತನ್ನ ರಾಜ್ಯದಲ್ಲಿ ದೊರೆಯುವ ಸಂಪತ್ತು ಎಷ್ಟಿರಬಹುದೆಂದು ವಿಚಾರಿಸಿದ ಮೇಲೆ, ಆ ಹಣವು ಸಾಲದು ಎಂದು
ಮನವರಿಕೆಯಾಯಿತು.ಪ್ರಜೆಗಳಿಂದ ಈಗಾಗಲೇ ತೆರಿಗೆ ಬಾಕಿಗಳು ಎಲ್ಲಾ ವಸೂಲಿಯಾಗಿದೆ. ಏನು ಮಾಡಬೇಕೆಂಬುದೇ ತೋಚದಾಯಿತು.ಕೊನೆಗೆ ಸಂಪತ್ತಿನ ಸರ್ವಾಧಿಕಾರಿಯಾದ, ಕುಬೇರನ ಮೇಲೆ ಯುದ್ಧಕ್ಕೆ ಹೊರಡಲು ಸೈನ್ಯ ಸಮೇತ ಸಿದ್ಧನಾಗಿ ಅರಮನೆಯನ್ನು ಬಿಟ್ಟನು.ರಾಜ ಮತ್ತು ಸೈನಿಕರು ಸಂಜೆಯ ವೇಳೆಗೆ, ಒಂದು ವನದ ಬಳಿ ಬಂದರು, ರಾತ್ರಿ ಅಲ್ಲಿಯೇ ಕಳೆಯಬೇಕಾಯಿತು. ಆ ವನವೆಲ್ಲ ಶಮಿ ವೃಕ್ಷಗಳಿಂದ ತುಂಬಿತ್ತು.ಇತ್ತ ಕುಬೇರನಿಗೆ, ಸೂರ್ಯ ವಂಶದ ರಾಜನು ತನ್ನ ಮೇಲೆ ಕೇವಲ ಸಂಪತ್ತಿಗಾಗಿ ಯುದ್ಧಕ್ಕೆ ಬರುತ್ತಿರುವ ಕಾರಣವು ತನ್ನ ದಿವ್ಯ ದೃಷ್ಟಿಯಿಂದ ತಿಳಿಯಿತು.ಇಂತಹ ರಾಜನೊಂದಿಗೆ ಯುದ್ಧವು ಸಲ್ಲದೆಂದು ಬಗೆದು, ರಾಜನು ತಂಗಿದ್ದ ವನದಲ್ಲಿ ಇರುವ ಶಮಿ ವೃಕ್ಷಗಳ ಪ್ರತಿಯೊಂದು ಎಲೆಯು ಸುವರ್ಣ ನಾಣ್ಯಗಳಿಂದ ಸೂಸುವಂತೆ ತನ್ನ ಮಾಯೆಯಿಂದ ಉಂಟುಮಾಡಿದನು.
ಎಂದಿನಂತೆ ಬೆಳಗಾಯಿತು, ಕುಬೇರನ ಮೇಲೆ ಯುದ್ಧ

ಮಾಡಲು,ವನದಲ್ಲಿ ಸೈನಿಕರೊಂದಿಗೆ ತಂಗಿದ್ದ

ರಾಜನು ಪ್ರಯಾಣ ಮುಂದುವರಿಸಲು ಸಜ್ಜಾದನು. ಶಮಿ ವೃಕ್ಷದ ಪ್ರತಿಯೊಂದು ಎಲೆಯು ಸೂರ್ಯನ ಬೆಳಕಿನಲ್ಲಿ ಸುವರ್ಣ ನಾಣ್ಯವಾಗಿ ಹೊಳೆಯುತ್ತಿರುವುದನ್ನು ಗಮನಿಸಿ ಕುಬೇರನೊಂದಿಗೆ ಯುದ್ಧವನ್ನು ರದ್ದು ಮಾಡಿ, ತನಗೆ ಬೇಕಾದ ಸಂಪತ್ತು ಶಮಿ ವೃಕ್ಷದಿಂದಲೇ ಸಿಕ್ಕಿತೆಂದು ಸಂತೋಷಪಟ್ಟು, ಸಂಪತ್ತಿನ ಸಮೇತ ರಾಜಧಾನಿಗೆ ಹೋಗಿ, ಗುರುಗಳು ಕೇಳಿದ ಸುವರ್ಣ ನಾಣ್ಯಗಳನ್ನು ಹುಡಗನಿಗೆ ಕೊಟ್ಟು ತನ್ನ ವಂಶದ ಕೀರ್ತಿಯನ್ನು ಉಳಿಸಿಕೊಂಡನು.ಇತ್ತ ಶಿಷ್ಯನಿಂದ ಸ್ವೀಕರಿಸಿದ ಅಷ್ಟು ದೊಡ್ಡ ಮೊತ್ತದ ಗುರುದಕ್ಷಿಣೆಯನ್ನು ಕೊಡಲು ಕಾರಣನಾದ ಆ ರಾಜನ ಸಹೃದಯತೆ ಮತ್ತು ವಿಶಾಲ ಮನೋಭಾವನೆಗಳನ್ನು ಗುರುವು ಕೊಂಡಾಡಿದನು.ಬರಿದಾದ ರಾಜ್ಯ ಕೋಶವನ್ನು ಸಂಪತ್ತಿನಿಂದ ತುಂಬಿ ತುಳುಕುವಂತೆ ಮಾಡಿ, ಪುನಃ ರಾಜ್ಯವನ್ನು ಸಂಪದ್ಭರಿತವಾಗುವಂತೆ

ಮಾಡಿದನು.

ಇಂತಹ ಮಹಾ ಮಹಿಮೆಯುಳ್ಳ ಶಮಿ ವೃಕ್ಷದ ಎಲೆಗಳನ್ನು ಇಂದು ವಿನಿಮಯ ಮಾಡಿಕೊಂಡು ಮನೆಗಳಲ್ಲಿ ಇರಿಸಿಕೊಂಡರೆ ಕೈಗೂಳ್ಳುವ ಎಲ್ಲಾ ಕಾರ್ಯಗಳು ಯಶಸ್ವಿಯಾಗುವುದು.ಮನೆಯು ಸಂಪತ್ಪರಿತವಾಗುವುದೆಂದು ಸಹಾ

ಹೇಳಲಾಗಿದೆ.ಅಂದು ಮಹಾರಾಜನು ವನದಲ್ಲಿದ್ದಾಗ, ಶಮೀವಕ್ಷದ ಪ್ರತಿಯೊಂದು ಎಲೆಯು

ಸುವರ್ಣಮಯವಾದ ದಿನವೇ ಆಶ್ವಯುಜ ಮಾಸ, ಶುಕ್ಲಪಕ್ಷದ ದಶಮಿ. ಆದ್ದರಿಂದ ಇಂದು ಈ ವೃಕ್ಷಕ್ಕೆ ಭಕ್ತಿಯಿಂದ ಪೂಜೆ ಮಾಡಿ, ಅದರ ಎಲೆಗಳನ್ನು ಮನೆಗೆ ತಂದು ಅಕ್ಕ ಪಕ್ಕದವರಿಗೆ ಕೊಟ್ಟು ಅವರಿಗೆ ಶುಭ ಹಾರೈಸಿ,ಎಲೆಗಳನ್ನು ಅರಾ, ಆಭರಣಗಳ ಪೆಟ್ಟಿಗೆಯಲ್ಲಿಟ್ಟರೆ, ಇರುವ ಸಂಪತ್ತು

ವೃದ್ಧಿಯಾಗುವುದೆಂದು ನಂಬಿಕೆ, ಶಮೀ ಶಮಯತೇ ಪಾಪಂ ಶಮೀ ಶತ್ರು ವಿನಾಶಿನೀ ಅರ್ಜುನಸ್ಯ ಧನುರ್ಧಾರೀ ರಾಮಸ್ಯ ಪ್ರಿಯದರ್ಶಿನೀ ಎಂಬಂತೆ ಬನ್ನಿ ಮರದ ಎಲೆಗಳು, ಪಾಪಗಳನ್ನು ಶತ್ರುಗಳನ್ನು ನಾಶ ಮಾಡುವುದರಿಂದ ,ಬನ್ನಿ ಎಲೆಗಳ

ವಿನಿಮಯದೊಂದಿಗೆ ಸಂಪತು ಸುಖ ಶಾಂತಿಗಳನ್ನು ವೃದ್ಧಿಸಿಕೊಂಡು ಬಾಳೋಣ.

+4 प्रतिक्रिया 1 कॉमेंट्स • 13 शेयर

कामेंट्स

+4 प्रतिक्रिया 0 कॉमेंट्स • 4 शेयर

+5 प्रतिक्रिया 3 कॉमेंट्स • 0 शेयर

+7 प्रतिक्रिया 0 कॉमेंट्स • 0 शेयर

+9 प्रतिक्रिया 0 कॉमेंट्स • 0 शेयर

+10 प्रतिक्रिया 0 कॉमेंट्स • 0 शेयर

+12 प्रतिक्रिया 0 कॉमेंट्स • 0 शेयर

+14 प्रतिक्रिया 1 कॉमेंट्स • 6 शेयर

भारत का एकमात्र धार्मिक सोशल नेटवर्क

Rate mymandir on the Play Store
5000 से भी ज़्यादा 5 स्टार रेटिंग
डेली-दर्शन, भजन, धार्मिक फ़ोटो और वीडियो * अपने त्योहारों और मंदिरों की फ़ोटो शेयर करें * पसंद के पोस्ट ऑफ़्लाइन सेव करें
सिर्फ़ 4.5MB