+3 प्रतिक्रिया 0 कॉमेंट्स • 5 शेयर
RENUKA RENUSHREE Feb 25, 2020

ಪುತ್ರವ್ಯಾಮೋಹ ಪುತ್ರವ್ಯಾಮೋಹವು ಎಷ್ಟೇ ದೃಢಚಿತ್ತರನ್ನೂ ಕೂಡಾ ಅಲುಗಾಡಿಸಿಬಿಡುತ್ತದೆ. ದಶರಥ, ದ್ರೋಣಾಚಾರ್ಯರಂತಹ ಅನೇಕ ಮೇಧಾವಿಗಳ ಉದಾಹರಣೆಗಳು ಪುರಾಣ-ಇತಿಹಾಸಗಳಲ್ಲಿವೆ. ಜೊತೆಗೆ ನಮ್ಮ ಅನುಭವದ ವಲಯದಲ್ಲೂ ಪುತ್ರವ್ಯಾಮೋಹಕ್ಕೆ ಒಳಗಾಗಿ ಸಣ್ಣತನವನ್ನು ಮೆರೆಯುವವರು ಅನೇಕರಿದ್ದಾರೆ. ಯಾವುದೋ ಒಂದು ಸಂದರ್ಭದಲ್ಲಿ ತಮ್ಮ ಮೋಹವು ಅತಿಯಾಯಿತೆನ್ನುವುದು ತಿಳಿಯುತ್ತದೆಯಾದರೂ ಆಗ ಕಾಲ ಮಿಂಚಿರುತ್ತದೆ. ಮಕ್ಕಳ ಬಗ್ಗೆ ಎಲ್ಲಾ ಹೆತ್ತವರಿಗೂ ಪ್ರೀತಿ-ಮಮತೆ ಇದ್ದೇಇರುತ್ತದೆ. ಅವರು ಚೆನ್ನಾಗಿ ಬಾಳಬೇಕು, ಉತ್ತಮರಾಗಿರಬೇಕು ಎಂದು ಕನಸು ಕಾಣುವುದು ಸಹಜ. ಈ ವಾತ್ಸಲ್ಯವು ಮಕ್ಕಳ ಸಮಗ್ರ ಬೆಳವಣಿಗೆಗೆ ಪೂರಕವಾಗಿರಬೇಕೆ ಹೊರತು, ವ್ಯಾಮೋಹವಾಗಿ ಬೆಳೆದು ಮಕ್ಕಳ ಸೋಲಿಗೆ ಕಾರಣವಾಗಬಾರದು. ಮಕ್ಕಳು ಶಿಸ್ತು, ಸಂಯಮವನ್ನು ಮೀರಿ ಉದ್ದಟತನವನ್ನು ತೋರುತ್ತಿದ್ದಾರೆ, ಅವರ ವ್ಯಕ್ತಿತ್ವವು ಪತನದಂಚಿಗೆ ತಲುಪಿದೆ ಎಂಬ ಸುಳಿವು ಸಿಕ್ಕಿದಾಗ, ಅದನ್ನು ಒಪ್ಪಿಕೊಳ್ಳದೆ, ಮಕ್ಕಳ ತಪ್ಪುಗಳಿಗೆ ಸಮಜಾಯಿಶಿಗಳನ್ನು ಕೊಡುತ್ತಾ ಸಮರ್ಥನೆಗೆ ನಿಲ್ಲುವಷ್ಟು ವ್ಯಾಮೋಹಕ್ಕೆ ಒಳಗಾಗುವವರಿದ್ದಾರೆ. ಇದರಿಂದ ಆ ಸಂದರ್ಭವನ್ನು ಗೆಲ್ಲಬಹುದು. ಆದರೆ ಅದು ಮಕ್ಕಳನ್ನು ಮತ್ತಷ್ಟು ಕೆಡುಕಿನತ್ತ ನೂಕುತ್ತದೆ. ಅವರ ಭವ್ಯ ಭವಿತವ್ಯಕ್ಕೆ ಹೆತ್ತವರೇ ಮುಳ್ಳಿಟ್ಟಂತಾಗುತ್ತದೆ. ಪ್ರಾಕೃತಿಕವಾಗಿಯೇ ಮನುಷ್ಯನಲ್ಲಿ ಸತ್ತ್ವ, ರಜಸ್ಸು ಮತ್ತು ತಮಸ್ಸು ಎಂಬ ಮೂರುಗುಣಗಳಿವೆ. ಇವು ವ್ಯಕ್ತಿಯಲ್ಲಿ ಅಸಮವಾಗಿ ಮೇಳೈಸಿ, ಮಾಯಾಮೋಹಕ್ಕೆ ತಳ್ಳಿಬಿಡುತ್ತದೆ. ಇದರಿಂದಾಗಿ ವ್ಯಕ್ತಿಯ ಬುದ್ಧಿಗೆ ಮಂಜುಕವಿದಂತಾಗುತ್ತದೆ. ನ್ಯಾಯ-ಅನ್ಯಾಯ, ಸರಿ-ತಪ್ಪುಗಳ ವಿವೇಚನೆ ಇಲ್ಲದೆ ಭಾವಾವೇಶಕ್ಕೆ ಒಳಗಾಗುತ್ತಾನೆ. ಹೀಗೆ ವ್ಯಕ್ತಿಯನ್ನು ಭವದ ಬಂಧನಕ್ಕೆ ಸಿಲುಕಿಸಿ, ಕಂಗೆಡಿಸುವ ನಂಟುಗಳಲ್ಲಿ ಮಕ್ಕಳ ಬಗೆಗಿನ ವ್ಯಾಮೋಹವೂ ಒಂದು. ಅದು ಹೃದಯದಾಳದಲ್ಲಿ ಸಂಚಲನೆಯನ್ನುಂಟು ಮಾಡಿ ಕಂಬನಿಯನ್ನುಕ್ಕಿಸುತ್ತದೆ. ಅದೆಂತಹ ಪ್ರತಿಕೂಲ ಸಂದರ್ಭಗಳು ಎದುರಾದರೂ ಚಿತ್ತಕ್ಷೋಭೆಗೆ ಒಳಗಾಗದೆ, ಎಲ್ಲವನ್ನೂ ಸಮಚಿತ್ತದಲ್ಲೇ ಎದುರಿಸಬಲ್ಲಂತಹ ವ್ಯಕ್ತಿಗಳು ಕೂಡಾ ತಮ್ಮ ಮಕ್ಕಳ ವಿಚಾರದಲ್ಲಿ ದುರ್ಬಲರಾಗಿರುತ್ತಾರೆ. ಮಕ್ಕಳು ಅನಾರೋಗ್ಯಕ್ಕೆ ತುತ್ತಾದರೆ, ಒಂದೆರಡು ದಿನ ಪ್ರವಾಸಕ್ಕೋ, ನೆಂಟರಿಷ್ಟರ ಮನೆಗೋ ಹೊರಟುಹೋದರೆ ಏನನ್ನೋ ಕಳೆದುಕೊಂಡವರಂತೆ ಚಡಪಡಿಸುತ್ತಾರೆ. ಮಕ್ಕಳಿಗೆ ತಮ್ಮದೇ ಆಸೆ,ಕನಸುಗಳಿವೆ ಎನ್ನುವುದನ್ನೂ ಗಮನಿಸದೆ, ತಮ್ಮ ಅಭಿಪ್ರಾಯಗಳನ್ನು, ತಮಗೆಟುಕದೇ ಹೋದ ಕನಸುಗಳನ್ನು ಮಕ್ಕಳ ಮೇಲೆ ಹೇರುತ್ತಾರೆ, ತಮ್ಮ ಕಣ್ಣಳತೆಯಲ್ಲೇ ಮಕ್ಕಳಿರುವಂತೆ ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತಾರೆ. ಮಕ್ಕಳಿಗೆ ಹೆತ್ತವರ ಈ ಅತಿಯಾದ ವ್ಯಾಮೋಹವೆ ಬಂಧನವೆನ್ನಿಸುವುದೂ ಸುಳ್ಳಲ್ಲ. ಭಾಗವತ ಪುರಾಣದಲ್ಲಿ ವ್ಯಾಸ ಮಹರ್ಷಿಗಳ ಕಥೆಯೊಂದಿದೆ. ವ್ಯಾಸರ ಮಗನಾದ ಶುಕ ಮಹರ್ಷಿಗಳು ಗರ್ಭದಲ್ಲಿರುವಾಗಲೇ ಬ್ರಹ್ಮಜ್ಞಾನಿಗಳಾಗಿದ್ದರು. ಹಾಗಾಗಿ ಉಪನಯನವಾಗುವುದರ ಮೊದಲೇ ಮನೆ ಬಿಟ್ಟು ಸಾಧನೆಯ ಹಾದಿಯನ್ನು ತುಳಿದರು. ದಿವ್ಯ ಜ್ಞಾನಿಗಳಾಗಿದ್ದರೂ ಕೂಡಾ ವ್ಯಾಸರು ಮಗನು ಮನೆ ಬಿಟ್ಟು ಹೋದುದನ್ನು ತಿಳಿದು ಕಣ್ಣೀರಿಟ್ಟರು. ಪುತ್ರವ್ಯಾಮೋಹದಿಂದ ಮಗನ ಹೆಸರನ್ನು ಕೂಗಿ ಕರೆಯುತ್ತಾ ಕಾಡುಮೇಡುಗಳಲ್ಲಿ ಅಲೆದಾಡಿದರು. ಆಗ ಮರ-ಗಿಡ, ಗುಡ್ಡ-ಬೆಟ್ಟಗಳು ವ್ಯಾಸರ ದನಿಯನ್ನು ಪ್ರತಿದ್ವನಿಸಿತು. ಅದನ್ನು ಕೇಳಿ ‘ಶುಕನೇ ಬ್ರಹ್ಮ, ಬ್ರಹ್ಮನೇ ಶುಕನು , ಶುಕನು ಎಲ್ಲೆಲ್ಲೂ ಮಿಳಿತನಾಗಿದ್ದಾನೆ’ ಎಂದರಿತು, ಸಮಾಧಾನವನ್ನು ಹೊಂದಿದರು. ಹಾಗಾಗಿ ಪುತ್ರವ್ಯಾಮೋಹವು ಎಷ್ಟೇ ದೃಢಚಿತ್ತರನ್ನೂ ಕೂಡಾ ಅಲುಗಾಡಿಸಿಬಿಡುತ್ತದೆ. ದಶರಥ, ದ್ರೋಣಾಚಾರ್ಯರಂತಹ ಅನೇಕ ಮೇಧಾವಿಗಳ ಉದಾಹರಣೆಗಳು ಪುರಾಣ-ಇತಿಹಾಸಗಳಲ್ಲಿವೆ. ಜೊತೆಗೆ ನಮ್ಮ ಅನುಭವದ ವಲಯದಲ್ಲೂ ಪುತ್ರವ್ಯಾಮೋಹಕ್ಕೆ ಒಳಗಾಗಿ ಸಣ್ಣತನವನ್ನು ಮೆರೆಯುವವರು ಅನೇಕರಿದ್ದಾರೆ. ಯಾವುದೋ ಒಂದು ಸಂದರ್ಭದಲ್ಲಿ ತಮ್ಮ ಮೋಹವು ಅತಿಯಾಯಿತೆನ್ನುವುದು ತಿಳಿಯುತ್ತದೆಯಾದರೂ ಆಗ ಕಾಲ ಮಿಂಚಿರುತ್ತದೆ. ಪ್ರಾಣಿ-ಪಕ್ಷಿಗಳು ಕೂಡಾ ಒಂದು ಹಂತದ ಬಳಿಕ ಮರಿಗಳ ಮೇಲಿನ ವ್ಯಾಮೋಹದಿಂದ ಬಿಡಿಸಿಕೊಳ್ಳುತ್ತವೆ. ಬುದ್ಧಿವಂತನಾದ ಮನುಷ್ಯನು ಮಾತ್ರ ಭಾವನೆಗಳಿಗೆ ಬಲಿಯಾಗುತ್ತಾನೆ. ಇದರಿಂದ ಪಾರಾಗುವುದು ಹೇಗೆ? ನಿಸರ್ಗ ಸಹಜವಾಗಿರುವ ತ್ರಿಗುಣಗಳಲ್ಲಿ, ಸತ್ತ್ವಗುಣವನ್ನು ಉದ್ದೀಪನಗೊಳಿಸುವಂತಹ ಸತ್ಕರ್ಮಗಳನ್ನು ಮಾಡುತ್ತಾ, ವಿವೇಕಿಗಳಾದವರು ತನ್ನಲ್ಲುದಿಸಿದ ವ್ಯಾಮೋಹವನ್ನು ಕೈಬಿಡುವಲ್ಲಿ ಸಫಲರಾಗುತ್ತಾರೆ. ಮಕ್ಕಳ ಮೇಲಿನ ವ್ಯಾಮೋಹವು ಪ್ರಕೃತಿ ಸಹಜವೇ ಆಗಿದ್ದರೂ ಅದನ್ನು ಗಮನಿಸದೆ, ತನ್ನದಾದ ಕರ್ತವ್ಯವನ್ನು ನಿರ್ಮಮ ಭಾವದಿಂದ ಮಾಡುವ ಎಚ್ಚರವು ಮೂಡಿದರೆ ಕಣ್ಣೀರಿಡುವ ಪರಿಸ್ಥಿತಿಯು ಎದುರಾಗಲಾರದು. ಶಾಂತರಾಗಿಯೇ ಎಲ್ಲವನ್ನೂ ನಿಭಾಯಿಸುವ ಸಾಮರ್ಥ್ಯವು ಮೈಗೂಡೀತು. - (ಕವಿತಾ ಅಡೂರು) ತನುಭವವ್ಯಾಮೋಹ ಮುಸುಕಿತಾ ವ್ಯಾಸನಂ, ಜನಿಪುದದು ಪ್ರಕೃತಿತಂತ್ರದೆ ಹೃದಯತಲದೊಳ್. ಕ್ಷಣಮಾತ್ರಮಾನುಮದು ಕಣ್ಣೀರ ಬರಿಸುವುದು, ಗಣಿಸಬೇಡದನು ನೀಂ-ಮಂಕುತಿಮ್ಮ. ಕೃಷ್ಣಾರ್ಪಣಮಸ್ತು (ಸತ್ಸಂಗ ಸಂಗ್ರಹ)

+15 प्रतिक्रिया 1 कॉमेंट्स • 27 शेयर
Rachana manju Feb 25, 2020

+3 प्रतिक्रिया 0 कॉमेंट्स • 0 शेयर
Anand Manjeshwar Feb 25, 2020

+22 प्रतिक्रिया 1 कॉमेंट्स • 0 शेयर
SUPRIYA SHET Feb 25, 2020

+237 प्रतिक्रिया 31 कॉमेंट्स • 61 शेयर
Prakash Prak Feb 25, 2020

+4 प्रतिक्रिया 0 कॉमेंट्स • 4 शेयर
Nagaraj poojary Feb 25, 2020

+6 प्रतिक्रिया 0 कॉमेंट्स • 5 शेयर

+2 प्रतिक्रिया 0 कॉमेंट्स • 1 शेयर
Ramachar joshi Feb 25, 2020

+3 प्रतिक्रिया 0 कॉमेंट्स • 11 शेयर
Nagaraj poojary Feb 25, 2020

+3 प्रतिक्रिया 0 कॉमेंट्स • 0 शेयर
Nagaraj poojary Feb 25, 2020

+4 प्रतिक्रिया 0 कॉमेंट्स • 3 शेयर
Amrutha 😁🐅 Feb 25, 2020

+4 प्रतिक्रिया 1 कॉमेंट्स • 3 शेयर
Nagaraj poojary Feb 25, 2020

+4 प्रतिक्रिया 0 कॉमेंट्स • 0 शेयर