mymandir

भारत का #1 धार्मिक सोशल नेटवर्क

ಕನ್ನಡ

2019 ವೃಶ್ಚಿಕ ರಾಶಿ ಭವಿಷ್ಯ

ವೃಶ್ಚಿಕ

ವೃಶ್ಚಿಕ ರಾಶಿಯವರು ಸಾಮಾನ್ಯವಾಗಿ ರಚನಾತ್ಮಕ ವ್ಯಕ್ತಿಗಳಾಗಿದ್ದು ಜೀವನವನ್ನು ಚೆನ್ನಾಗಿ ಅರ್ಥೈಸಿಕೊಂಡವರಾಗಿರುತ್ತಾರೆ. ಹೊರನೋಟಕ್ಕೆ ಕಠಿಣ ವ್ಯಕ್ತಿಗಳಂತೆ ಕಂಡರೂ ನೀವು ಬಹಳ ಮೃದು ಸ್ವಭಾವದವರು. ನೀವು ನಿಮ್ಮ ಕ್ಷೇತ್ರದಲ್ಲಿ 2019ರಲ್ಲಿ ಏಳಿಗೆ ಕಾಣುತ್ತೀರಿ ಮತ್ತು ನೀವು ಅಂದುಕೊಂಡ ಸಾಧನೆ ಮಾಡಲಿದ್ದೀರಿ. ನೀವು ಕೆಲವು ಕಠಿಣ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ, ಅವು ನಿಮ್ಮನ್ನು ಮತ್ತಷ್ಟು ಗಟ್ಟಿಗರನ್ನಾಗಿಸುತ್ತದೆ. 2019 ರಲ್ಲಿ ಅನೇಕ ಪ್ರವಾಸ ಕೈಗೊಳ್ಳಬೇಕಾಗಿಬರುತ್ತದೆ, ನೀವು ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚೆಚ್ಚು ಕಾಳಜಿ ವಹಿಸಬೇಕು. 2019 ರಲ್ಲಿ ನಿಮ್ಮ ಸಂಬಂಧಗಳು ಉತ್ತಮವಾಗಿರುತ್ತದೆ. ನಿಮ್ಮೊಳಗೆ ಅನೇಕ ಸಂಘರ್ಷಗಳಿರುವುದರಿಂದ ಆದಷ್ಟು ಶಾಂತಿ ಕಾಪಾಡಿಕೊಳ್ಳಿ. ನಿಧಾನವಾಗಿ ಆಲೋಚಿಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ಉದ್ಯೋಗ ಮತ್ತು ವ್ಯಾಪಾರ

ವರ್ಷದ ಮೊದಲ ತಿಂಗಳುಗಳು ಒತ್ತಡವಿದ್ದರೂ ನಿಮ್ಮ ಪರಿಶ್ರಮ ಫಲಕೊಡಲಿದೆ. ನಿಮ್ಮ ಕ್ಷೇತ್ರದಲ್ಲಿ ಹೆಚ್ಚು ಕಲಿತು ಒಳ್ಳೆಯ ಹೆಸರು ಮಾಡುವಿರಿ. ಕೆಲಸದ ಮೇಲೆ ವಿದೇಶಕ್ಕೆ ಹೋಗಬೇಕಾಗಬಹುದು. ಕೆಲವೊಮ್ಮೆ ಅವಧಿಗೆ ಮುಂಚೆ ಕೆಲಸ ಪೂರೈಸಲು ಹೆಚ್ಚು ಕೆಲಸ ಮಾಡಬೇಕಾಗಬಹುದು. ವ್ಯಾಪಾರಸ್ಥರಿಗೆ ವರ್ಷದ ಮೊದಲ ತ್ರೈಮಾಸಿಕದಲ್ಲಿ ಲಾಭ ಸಿಗಲಿದೆ. ಇತರರೊಂದಿಗೆ ಪಾಲುದಾರಿಕೆ ಮಾಡುವುದರಿಂದ ಲಾಭ ಬರಲಿದೆ. ವರ್ಷದ ಮಧ್ಯದ ತಿಂಗಳುಗಳಲ್ಲಿ ಹೆಚ್ಚು ಶ್ರಮವಾದರೂ ಒಳ್ಳೆಯ ಹೆಸರು ಗಳಿಸುವಿರಿ. ಆಗಸ್ಟ್ ಮತ್ತು ಸೆಪ್ಟೆಂಬರಿನಲ್ಲಿ ಪ್ರಮೋಶನ್ನುಗಳು ಸಿಗಲಿವೆ. ನಿಮ್ಮ ಪರಿಶ್ರಮದ ಫಲ ಅಕ್ಟೋಬರಿನಲ್ಲಿ ಸಿಗುತ್ತದೆ. 2019ರಲ್ಲಿ ನಿಮ್ಮ ಉದ್ಯೋಗದ ಜೀವನ ಸುಖಮಯವಾಗಿರಲಿದೆ.

ಹಣಕಾಸು

ವರ್ಷದ ಮೊದಲಲ್ಲಿ ಖರ್ಚು-ವೆಚ್ಚ ಹೆಚ್ಚಾಗುತ್ತದೆ. ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ ಹೂಡಿಕೆ ಮಾಡುವಿರಿ. ನಿಮ್ಮ ಕೆಲಸ-ಕಾರ್ಯ ಮತ್ತು ಅನೇಕ ಸೃಜನಾತ್ಮಕ ಕೆಲಸಗಳಿಂದ ಲಾಭ ಸಿಗಲಿದೆ. ಸ್ವಂತ ಉದ್ಯೋಗ ಮಾಡುತ್ತಿರುವವರು ಧನಲಾಭ ಪಡೆಯುತ್ತೀರಿ. ಏಪ್ರಿಲ್-ಮೇ ತಿಂಗಳುಗಳಲ್ಲಿ ಮದುವೆ ಮುಂತಾದ ಕಾರ್ಯಗಳಿಗಾಗಿ ಖರ್ಚು ಮಾಡಬೇಕಾಗಬಹುದು. ಆರೋಗ್ಯಕ್ಕೆ ಸಂಬಂಧಪಟ್ಟ ಖರ್ಚಾಗಬಹುದು. ಒಟ್ಟಾರೆ, ಉತ್ತಮ ವರ್ಷವಾದರೂ, ಖರ್ಚಿನ ಬಗ್ಗೆ ಗಮನವಿಡುವುದು ಒಳಿತು.

ವಿದ್ಯಾಭ್ಯಾಸ

ವರ್ಷದ ಮೊದಲ ತಿಂಗಳುಗಳಲ್ಲಿ ಅತ್ಯುತ್ತಮ ಫಲಿತಾಂಶ ಬರುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವವರಿಗೆ ಸಿಹಿ ಸುದ್ದಿ ಸಿಗಲಿದೆ. ಕೆಲವರಿಗೆ ಪಾಠ ಮಾಡುವ ಅರೆಕಾಲಿಕ ಕೆಲಸವೂ ಸಿಗಲಿದೆ. ನೀವು ಬಯಸಿದ ಕೋರ್ಸ್ ಗಳಿಗೆ ಸೇರುವಿರಿ, ಆದರೆ ತಪ್ಪದೇ ಹೆಚ್ಚೆಚ್ಚು ಪರಿಶ್ರಮ ಹಾಕಬೇಕು. ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗುವ ಅವಕಾಶವಿದೆ. ಸೋಮಾರಿತನದಿಂದ ದೂರವಿರಿ. ವರ್ಷದ ಮಧ್ಯದ ತಿಂಗಳುಗಳಲ್ಲಿ ಹೋಟೆಲ್ ಮ್ಯಾನೇಜ್ ಮೆಂಟ್, ಸಂಶೋಧನಾ ವಿದ್ಯಾರ್ಥಿಗಳಿಗೆ, ತಂತ್ರಜ್ಞಾನ, ಹಾಗೂ ಕಾನೂನು ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಸಿಗಲಿದೆ. ನಿಮ್ಮ ಶಿಕ್ಷಕರು, ಪ್ರೊಫೆಸರ್ ಗಳಿಂದ ಬಹಳ ಸಹಾಯ ಪಡೆಯುವಿರಿ. ಕೆಲಸವೂ ಸಿಗುವ ಸಾಧ್ಯತೆಗಳಿದೆ.

ಕುಟುಂಬ

ಸಂಬಂಧಗಳಲ್ಲಿ ಸ್ವಲ್ಪ ಮನಸ್ತಾಪಗಳು ಬರುತ್ತವೆ. ನಿಮ್ಮ ಮಕ್ಕಳ ಜೊತೆ ಉತ್ತಮ ಸಂಬಂಧವಿರಲಿದೆ, ಅವರ ವಿದ್ಯಾಭ್ಯಾಸದ ಬಗ್ಗೆ ಹೆಚ್ಚು ಗಮನ ಕೊಡುತ್ತೀರಿ, ಆದರೆ ಹಿರಿಯರೊಡನೆ ಮತ್ತು ನಿಮ್ಮ ಸಹೋದರ/ಸಹೋದರಿಯರೊಡನೆ ಮನಸ್ತಾಪವಾಗುವ ಸಂಭವವಿದೆ. ಆದಷ್ಟು ವಾದ ಮಾಡದೇ ಶಾಂತವಾಗಿರಿ. ನಿಮ್ಮ ಸಂಗಾತಿಯೊಡನೆ ಸಂಬಂಧ ಚೆನ್ನಾಗಿರಲಿದೆ. ಹಿರಿಯರೊಡನೆ ನಿಮ್ಮ ಸಂಬಂಧದಲ್ಲಿ ಕಸಿವಿಸಿಯಾಗುವ ಸಂಭವವಿದೆ. ವರ್ಷದ ಮಧ್ಯದ ತಿಂಗಳುಗಳಲ್ಲಿ ನಿಮ್ಮ ಸಂಬಂಧಿಕರೊಡನೆ ಪ್ರವಾಸ ಕೈಗೊಳ್ಳುವ ಸಂಭವವಿದೆ. ಆಗಸ್ಟ್-ಸೆಪ್ಟೆಂಬರ್ ನಲ್ಲಿ ಸಂಬಂಧಿಕರೆಲ್ಲರೂ ಒಟ್ಟುಗೂಡುವ ಸಂಭವವಿದೆ.

ಪ್ರೀತಿ-ಪ್ರೇಮ/ಸಂಬಂಧ

ಅನೇಕ ವೃಶ್ಚಿಕ ರಾಶಿಯವರಿಗೆ ನಿಮ್ಮ ಪ್ರೀತಿಯ ವಿಚಾರ ಚೆನ್ನಾಗಿರಲಿದೆ. ನಿಮ್ಮದು ಬಹಳ ಗಾಢವಾದ ಪ್ರೀತಿ. ವರ್ಷದ ಮೊದಲಲ್ಲಿ ನೀವು ಸಿನಿಮಾಗಳಂತೆ ಮೊದಲ ನೋಟಕ್ಕೆ ಪ್ರೀತಿಗೆ ಬೀಳುವುದುಂಟು. ಪ್ರೀತಿಯನ್ನು ಎಂದಿಗೂ ಪರೀಕ್ಷಿಸಬಾರದು, ಅದನ್ನು ಬೆಳೆದು ಬಲಿಯಲು ಬಿಡಬೇಕು. ಮದುವೆಯಾಗದವರು ಪ್ರೀತಿಸಿ ಮದುವೆಯಾಗುವ ಸಾಧ್ಯತೆ ಇದೆ. ಮದುವೆಯಾದವರ ಜೀವನ ಸುಗಮವಾಗಿರಲಿದೆ. ನಿಮ್ಮ ಸಂಗಾತಿಗೆ ಏಪ್ರಿಲ್ ತಿಂಗಳಲ್ಲಿ ಉತ್ತಮ ಉಡುಗೊರೆ ಕೊಡುವಿರಿ. ಕೆಲವರ ಮನೆಯಲ್ಲಿ ನಿಮ್ಮ ಪ್ರೀತಿಯನ್ನು ಒಪ್ಪದಿರಲೂಬಹುದು.

ಆರೋಗ್ಯ

ಆರೋಗ್ಯದಲ್ಲಿ ಸ್ವಲ್ಪ ತೊಡಕಾಗುವ ಸಾಧ್ಯತೆಗಳಿವೆ. ಯಾವುದನ್ನೂ ವಿಪರೀತವಾಗಿ ಮಾಡದಿರಿ. ನಿಮ್ಮ ವಯಸ್ಸಿಗೆ ಬೇಕಿದ್ದಷ್ಟು ವ್ಯಾಯಾಮ ಮಾಡಿ, ಆದಷ್ಟು ವಿಶ್ರಾಮ ಪಡೆಯಿರಿ. ಕೆಲಸದ ಒತ್ತಡದಿಂದ ವರ್ಷದ ಮಧ್ಯಂತರದಲ್ಲಿ ಕಷ್ಟವಾಗಬಹುದು, ಇದರ ಬಗ್ಗೆ ಎಚ್ಚರವಿರಲಿ. ಸಂಧಿವಾತ, ಜೀರ್ಣದ ಸಮಸ್ಯೆ, ಮತ್ತು ರಕ್ತಕ್ಕೆ ಸಂಬಂಧಪಟ್ಟ ಖಾಯಿಲೆ ಬಗ್ಗೆ ಎಚ್ಚರವಿರಲಿ.

LEAVE A RESPONSE

Your email address will not be published. Required fields are marked *

Bitnami