mymandir

भारत का #1 धार्मिक सोशल नेटवर्क

ಕನ್ನಡ

2019 ಮೀನ ರಾಶಿ ಭವಿಷ್ಯ

ಮೀನ

ಮೀನ ರಾಶಿಯವರು ಒಳ್ಳೆಯ ಹೃದಯದವರು ಮತ್ತು ತತ್ತ್ವಜ್ಞಾನದಲ್ಲಿ ಆಸಕ್ತಿ ಹೊಂದಿರುವಂಥವರು. ನೀವು ಎಲ್ಲರೊಂದಿಗೆ ಹೊಂದಿಕೊಳ್ಳುವವರು ಮತ್ತು ಇತರರ ತೊಂದರೆಗಳಿಗೆ ಪರಿಹಾರ ಸೂಚಿಸುವವರು. 2019ರಲ್ಲಿ ಹೊಸ ಮಿತ್ರರನ್ನು ಸಂಪಾದಿಸುತ್ತೀರಿ. ನಿಮ್ಮ ಉದ್ಯೋಗದ ಜೀವನ ಹಾಗೂ ಹಣಕಾಸಿನ ಸ್ಥಿತಿ ಉತ್ತಮವಾಗಿರಲಿದೆ. ನೀವು ಶ್ರಮಜೀವಿ. ನಿಮ್ಮ ಕುಟುಂಬದವರೊಂದಿಗೆ ನಿಮ್ಮ ಸಂಬಂಧ ಉತ್ತಮವಾಗಿರಲಿದೆ.

ಉದ್ಯೋಗ ಮತ್ತು ವ್ಯಾಪಾರ

ನಿಮ್ಮ ಉದ್ಯೋಗದ ಜೀವನ ಚೆನ್ನಾಗಿರಲಿದ್ದು ನಿಮ್ಮ ಯಶಸ್ಸು ಸಿಗಲಿದೆ. ವರ್ಷದ ಮೊದಲಲ್ಲಿ ಒತ್ತಡಗಳಿರಲಿವೆ, ನೀವು ಹೆಚ್ಚು ಶ್ರಮಪಡಬೇಕಾಗಬಹುದು, ಆದರೆ ಕೊನೆಯಲ್ಲಿ ಎಲ್ಲಾ ಒಳ್ಳೆಯದಾಗಲಿದೆ. ನಿಮ್ಮ ವ್ಯಾಪಾರವು ನಿಮಗೆ ಲಾಭ ತಂದುಕೊಡಲಿದೆ. ಮಾರ್ಚಿ ತಿಂಗಳಲ್ಲಿ ವರ್ಗಾವಣೆಯ ಸಾಧ್ಯತೆ ಇದೆ. ನಿಮ್ಮ ವ್ಯಾಪಾರವನ್ನು ವಿಸ್ತರಿಸಲು ಹೆಚ್ಚು ಪ್ರವಾಸ ಕೈಗೊಳ್ಳಬೇಕಾಗಿಬರಬಹುದು. ಸರ್ಕಾರಿ ಯೋಜನೆಗಳ ಲಾಭ ನಿಮಗೆ ಸಿಗಲಿವೆ. ಸ್ವಲ್ಪ ಮಟ್ಟದಲ್ಲಿ ನಿಮ್ಮ ಸಹಉದ್ಯೋಗಿಗಳ ಜೊತೆ ಇರುಸು-ಮುರುಸು ಉಂಟಾಗಬಹುದು.

ಹಣಕಾಸು

ನಿಮಗೆ ಸಾಕಷ್ಟು ಹಣ ಬರುತ್ತದೆ, ಆದರೆ ಖರ್ಚು ಹೆಚ್ಚಾಗಿರಲಿದೆ. ಉದ್ಯೋಗದಲ್ಲಿ ನಿಮ್ಮ ಶ್ರಮದ ಪ್ರತಿಫಲವಾಗಿ ಹಣ ಗಳಿಸುತ್ತೀರಿ. ವ್ಯಾಪಾರಿಗಳು ಲಾಭ ನೋಡುವಿರಿ. ವರ್ಷದ ಮೊದಲ ತಿಂಗಳು ನಿಮ್ಮ ಸ್ವಂತ ಕೆಲಸಗಳಿಗಾಗಿ ಪ್ರವಾಸ ಮಾಡುವುದರಿಂದ ಖರ್ಚು ಹೆಚ್ಚಾಗಲಿದೆ. ವಿಮೆಯ ಮೇಲೆ ಹಣ ಹಾಕುವಿರಿ. ಆಸ್ತಿ-ನಿವೇಶನಗಳ ಮೇಲೆ ಹೂಡುವಾಗ ಎಚ್ಚರವಿರಲಿ. ವರ್ಷದ ಮಧ್ಯದ ತಿಂಗಳುಗಳಲ್ಲಿ ಕುಟುಂಬದ ಧಾರ್ಮಿಕ ಕಾರ್ಯಕ್ರಮಕ್ಕಾಗಿ ಹಣ ವೆಚ್ಚಮಾಡಬಹುದು. ಅಕ್ಟೋಬರಿನಲ್ಲಿ ಇಂಕ್ರಿಮೆಂಟ್, ಇಂಸೆಂಟಿವ್ ಮೂಲಕ ಹಣ ಗಳಿಸಲಿರುವಿರಿ. ವಿದೇಶದಲ್ಲಿ ಹೂಡಿಕೆ ಮಾಡುವುದರಿಂದಲೂ ಲಾಭ ಪಡೆಯುತ್ತೀರಿ.

ವಿದ್ಯಾಭ್ಯಾಸ

2019 ಮೀನ ರಾಶಿಯ ವಿದ್ಯಾರ್ಥಿಗಳಿಗೆ ಉತ್ತಮ ವರ್ಷ. ನಿಮ್ಮ ಶಿಕ್ಷಕರು ಮತ್ತು ಗುರುಗಳಿಂದ ಹೆಚ್ಚೆಚ್ಚು ಸಹಾಯ ಪಡೆಯುವಿರಿ. 2019ರಲ್ಲಿ ಆತ್ಮ ವಿಶ್ವಾಸ ಮತ್ತು ಕಠಿಣ ಪರಿಶ್ರಮದಿಂದ ಯಶಸ್ಸು ಪಡೆಯುವಿರಿ. ಸೋಮಾರಿತನ ಮತ್ತು ಕೆಲಸವನ್ನು ಮುಂದೂಡುವುದರಿಂದ ದೂರವಿರಿ. ಉನ್ನತ ಶಿಕ್ಷಣದಲ್ಲಿರುವವರು ಯಶಸ್ಸು ಕಾಣುತ್ತಾರೆ. ವರ್ಷದ ಮಧ್ಯದ ನಂತರ ತಿಂಗಳುಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳುವವರಿಗೆ ಸಿಹಿ ಸುದ್ದಿ ಸಿಗಲಿದೆ.

ಕುಟುಂಬ

ನಿಮ್ಮ ಕುಟುಂಬದವರೊಡನೆ ಸಂಬಂಧ ಚೆನ್ನಾಗಿರಲಿದ್ದು ಎಲ್ಲರೂ ನಿಮಗೆ ಸಹಾಯ ಮಾಡುತ್ತಾರೆ. ನಿಮ್ಮ ತಂದೆಯವರ ಆಶೀರ್ವಾದ ನಿಮ್ಮ ಮೇಲೆ ಸದಾ ಇರಲಿದೆ. ನಿಮ್ಮ ಸಂಗಾತಿಯೊಡನೆ ಸಂಬಂಧ ಉತ್ತಮವಾಗಿರಲಿದೆ. ವರ್ಷದ ಮೊದಲ ತ್ರೈಮಾಸಿಕದಲ್ಲಿ ಕುಟುಂಬದವರೊಡನೆ ಪ್ರವಾಸಕ್ಕೆಂದು ಹೋಗುವ ಸಂಭವವಿದೆ. ಸಂಗಾತಿ ಮತ್ತು ತಾಯಿಯ ಆರೋಗ್ಯದ ತೊಂದರೆಯಾಗಬಹುದು. ವರ್ಷದ ಮಧ್ಯದ ತಿಂಗಳಲ್ಲಿ ನಿಮ್ಮ ಕುಟುಂಬದಲ್ಲಿ ಧಾರ್ಮಿಕ ಕಾರ್ಯ ನಡೆಯಬಹುದು. ಅಕ್ಟೋಬರಿನಲ್ಲಿ ನಿಮಗೆ ಬರಬೇಕಿದ್ದ ಆಸ್ತಿ ಬರುವ ಸಾಧ್ಯತೆ ಇದೆ. ನಿಮ್ಮ ಮಕ್ಕಳು ನಿಮಗೆ ಹೆಮ್ಮೆ ತರುವಂಥ ಕೆಲಸ ಮಾಡುತ್ತಾರೆ.

ಪ್ರೀತಿ-ಪ್ರೇಮ/ಸಂಬಂಧ

ಮೀನ ರಾಶಿಯವರು ಅರ್ಥವಿಲ್ಲದ ನೋವುಂಟುಮಾಡುತ್ತಿರುವ ಸಂಬಂಧದಿಂದ ಹೊರಬಂದು ಉತ್ತಮ ಸಂಬಂಧಗಳನ್ನು ಕಟ್ಟಿಕೊಳ್ಳಲಿರುವಿರಿ. ವರ್ಷದ ಮೊದಲ ತಿಂಗಳುಗಳಲ್ಲಿ ಜನರ ಜೊತೆ ಬೆರೆಯುವುದರಿಂದ ಹೊಸಬರನ್ನು ಭೇಟಿ ಮಾಡುತ್ತೀರಿ. ನಿಮ್ಮ ಕುಟುಂಬದವರು ನಿಮ್ಮ ನಿರ್ಧಾರಗಳನ್ನು ಧಿಕ್ಕರಿಸಬಹುದು. ಮದುವೆಯಾಗದವರು ಪ್ರವಾಸ ಮಾಡುವಾಗ ಹೊಸಬರನ್ನು ಭೇಟಿ ಮಾಡಿ ಮುಂದೆ ಅವರೊಂದಿಗೆ ಉತ್ತಮ ಸಂಬಂಧ ಕಲ್ಪಿಸಿಕೊಳ್ಳುವ ಸಾಧ್ಯತೆ ಇದೆ. ನಿಮ್ಮ ಕುಟುಂಬದವರೂ ನಿಮಗೆ ಸಂಗಾತಿ ಹುಡುಕುವ ಪ್ರಯತ್ನ ಮಾಡುತ್ತಾರೆ. ಮದುವೆಯಾದವರ ಜೀವನ ಸಂತೋಷದಿಂದ ಕೂಡಿರಲಿದೆ. ಆಗಸ್ಟ್ ತಿಂಗಳಿನಲ್ಲಿ ಕೆಲವು ಕಿತ್ತಾಟ ಇದ್ದರೂ ಬೇಗ ಎಲ್ಲವೂ ಇತ್ಯರ್ಥವಾಗಲಿದೆ.

ಆರೋಗ್ಯ

ನಿಮಗೆ ಕೆಲವು ಆರೋಗ್ಯ ಸಮಸ್ಯೆ ಕಾಡಬಹುದು ಆದ್ದರಿಂದ ಪೌಷ್ಠಿಕ ಆಹಾರ ತೆಗೆದುಕೊಳ್ಳಿ ಮತ್ತು ದೈಹಿಕ ವ್ಯಾಯಾಮ ತಪ್ಪದೆ ಮಾಡಿ. ಒತ್ತಡವನ್ನು ಸರಿಯಾಗಿ ನಿಭಾಯಿಸಿ. ಉಸಿರಾಟದ ಸಮಸ್ಯೆಯ ಬಗ್ಗೆ ಎಚ್ಚರವಹಿಸಿ. ವರ್ಷದ ಮಧ್ಯದ ತಿಂಗಳಲ್ಲಿ ಚರ್ಮದ ಸಮಸ್ಯೆಯುಂಟಾಗುವ ಸಾಧ್ಯತೆ ಇದೆ. ವಯಸ್ಸಾದವರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಅಕ್ಟೋಬರಿನಲ್ಲಿ ಕಣ್ಣಿನ ತೊಂದರೆಯ ಬಗ್ಗೆ ಎಚ್ಚರವಹಿಸಿ.

LEAVE A RESPONSE

Your email address will not be published. Required fields are marked *

Bitnami