mymandir

भारत का #1 धार्मिक सोशल नेटवर्क

ಕನ್ನಡ

2019 ಮಕರ ರಾಶಿ ಭವಿಷ್ಯ

ಮಕರ

ಮಕರ ರಾಶಿಯವರು ಸ್ವಾತಂತ್ರ್ಯವಾಗಿ ಬದುಕುವಂತವರು. ನೀವು ಶ್ರಮಜೀವಿಗಳು. ಮತ್ತೊಬ್ಬರಿಗೆ ಸಹಾಯ ಮಾಡಲು ಯಾವಾಗಲೂ ಸಿದ್ಧವಿರುವವರು. ನೀವು ಎಲ್ಲರೊಂದಿಗೆ ಒಳ್ಳೆಯ ಸ್ನೇಹ ಮಾಡುತ್ತೀರಿ ಮತ್ತು ನಂಬಿಕೆಗೆ ಅರ್ಹರಾದವರು ಮತ್ತು ಯಾರಿಂದಲೂ ಏನನ್ನೂ ಬಯಸದವರು. 2019 ನಿಮಗೆ ಬಹಳ ಒತ್ತಡವಿರುತ್ತದೆ, ಚೆನ್ನಾಗಿ ಹಣ ಗಳಿಸುತ್ತೀರಿ, ಆದರೆ ಅದನ್ನು ಉಳಿಸಿಕೊಳ್ಳುವುದು ಕಷ್ಟವಾಗಬಹುದು. ನೀವು ನಿಮ್ಮ ಆರೋಗ್ಯದ ಬಗ್ಗೆ ಕಾಳಜಿವಹಿಸಬೇಕು. ನಿಮ್ಮ ಶ್ರಮದ ಪ್ರತಿಫಲ ನಿಮಗೆ ವರ್ಷದ ಕೊನೆಯಲ್ಲಿ ಸಿಗುತ್ತದೆ.

ಉದ್ಯೋಗ ಮತ್ತು ವ್ಯಾಪಾರ

2019 ರಲ್ಲಿ ಕೆಲಸದ ಒತ್ತಡವಿರುತ್ತದೆ. ನಿಮ್ಮ ಗುರಿಯನ್ನು ಸಮಯಕ್ಕೆ ಸರಿಯಾಗಿ ಮುಗಿಸುವ ಸಲುವಾಗಿ ನಿಮ್ಮ ಮೇಲೆ ನೀವೇ ಒತ್ತಡ ಹೇರಿಕೊಳ್ಳುವಿರಿ. ವರ್ಷದ ಮೊದಲ ವರ್ಷಗಳಲ್ಲಿ ಕೆಲಸದ ಮೇಲೆ ಪ್ರವಾಸಕ್ಕೆ ಹೋಗಬೇಕಾಗಬಹುದು. ನಿಮ್ಮ ಕೆಲಸದ ಪರಿಸರ ಚೆನ್ನಾಗಿರಲಿದೆ. ವ್ಯಾಪಾರಿಗಳಿಗೆ ಏಳು-ಬೀಳು ಇದ್ದದ್ದೇ. ಸೆಪ್ಟೆಂಬರ್ ತನಕ ಹೊಸ ಪಾಲುದಾರರೊಡನೆ ಸೇರದಿರುವುದು ಉತ್ತಮ. ಲೋನ್ ಮಾಡುವ ಮನಸ್ಸಿದ್ದರೆ ಆಗಸ್ಟಿನಲ್ಲಿ ಮಾಡಿ. ವ್ಯಾಪಾರಿಗಳು ತಮ್ಮ ಉದ್ಯೋಗವನ್ನು ವಿಸ್ತರಿಸುವ ಸಲುವಾಗಿ ಪ್ರವಾಸ ಕೈಗೊಳ್ಳಬೇಕಾಗುತ್ತದೆ. ಸರ್ಕಾರಿ ನೌಕರರಿಗೆ ವರ್ಗವಾಗುವ ಸಂಭವವಿದೆ.

ಹಣಕಾಸು

ನಿಮ್ಮ ಖರ್ಚಿನ ಮೇಲೆ ಹಿಡಿತ ಸಾಧಿಸಿದರೆ ಉತ್ತಮ ಲಾಭ ಪಡೆಯಬಹುದು. ಹಣ ಎಷ್ಟೇ ಬಂದರೂ ಕುಟುಂಬದ ನಿರ್ವಹಣೆಗೆ ಬಹಳ ಖರ್ಚಾಗುತ್ತಿರುತ್ತದೆ. ವರ್ಷದ ಮೊದಲ ತಿಂಗಳಲ್ಲಿ ಪ್ರವಾಸದ ಸಲುವಾಗಿ ಖರ್ಚು ಹೆಚ್ಚಾಗಬಹುದು. ಹೂಡಿಕೆ ಮಾಡುವಾಗ ಎಚ್ಚರವಿರಲಿ. ಮಕರ ರಾಶಿಯವರಿಗೆ ಉಡುಗೊರೆಗಳು ಮತ್ತು ಆಸ್ತಿ-ಪಾಸ್ತಿ ಸಿಗುವ ಸಂಭವವಿದೆ. ನಿಮ್ಮ ಮಿತ್ರರಿಗೆ ಹಣ ನೀಡುವಿರಿ. ಏಪ್ರಿಲ್ ನಲ್ಲಿ ಹೂಡಿಕೆ ಮಾಡುವಾಗ ಎಚ್ಚರವಿರಲಿ. ಮೇ ತಿಂಗಳಲ್ಲಿ ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ ಹೂಡಬಹುದು. ಆಗಸ್ಟ್ ತಿಂಗಳಲ್ಲಿ ಬಹಳ ಖರ್ಚಾಗುವ ಸಾಧ್ಯತೆ ಇದೆ. ನಿಮಗೆ ಗೊತ್ತಿಲ್ಲದ ಕಡೆಯಿಂದ ಹಣ ಬರುವ ಸಾಧ್ಯತೆ ಇದೆ. ನಿಮ್ಮ ಸಂಬಂಧಿಕರ ಆರೋಗ್ಯದ ಉಪಚಾರಕ್ಕಾಗಿ ಹಣ ನೀಡಬೇಕಾಗಬಹುದು.

ವಿದ್ಯಾಭ್ಯಾಸ

ವಿದ್ಯಾರ್ಥಿಗಳಿಗೆ 2019 ಉತ್ತಮ ವರ್ಷವಾಗಿರಲಿದೆ. ವಿದ್ಯಾರ್ಥಿಗಳು ಎಲ್ಲಾ ರೀತಿಯಲ್ಲೂ ಸಾಧನೆ ಮಾಡಲಿದ್ದಾರೆ. ವರ್ಷದ ಮೊದಲ ತಿಂಗಳೂಗಳು ವೈದ್ಯಕೀಯ ಮತ್ತು ಇಂಜಿನೀಯರಿಂಗ್ ವಿದ್ಯಾರ್ಥಿಗಳಿಗೆ ಉತ್ತಮವಾದವು. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುತ್ತಿರುವವರಿಗೆ ಉತ್ತಮ ಫಲಿತಾಂಶ ಸಿಗಲಿದೆ. ವಿದೇಶದಲ್ಲಿ ಓದಬಯಸುವವರಿಗೆ ಅವಕಾಶ ಸಿಗಲಿದೆ. ತಂತ್ರಜ್ಞಾನ ವಿದ್ಯಾರ್ಥಿಗಳಿಗೆ ಸ್ವಲ್ಪ ತೊಂದರೆಯಾದರೂ ಮುಂದೆ ಸುಧಾರಿಕೆ ಕಾಣುತ್ತದೆ. ಉನ್ನತ ಶಿಕ್ಷಣ ಮಾಡುತ್ತಿರುವವರಿಗೆ ಜೂನ್ ನಂತರ ಒಳ್ಳೆಯದಾಗುತ್ತದೆ. ಓದು ಮುಗಿಸುವವರಿಗೆ ಒಳ್ಳೆಯ ಉದ್ಯೋಗ ಸಿಗಲಿದೆ.

ಕುಟುಂಬ

ವರ್ಷದ ಮೊದಲ ತಿಂಗಳುಗಳಲ್ಲಿ ನಿಮ್ಮ ತಂದೆಯೊಡನೆ ಮನಸ್ತಾಪ ಉಂಟಾಗಬಹುದು. ನಿಮ್ಮ ಸಂಗಾತಿಯೊಡನೆ ವಾದ-ವಿವಾದಗಳಿಂದ ದೂರವಿರಿ. ನಿಮ್ಮ ಸಹೋದರರೊಡನೆ ಉತ್ತಮ ಬಾಂಧವ್ಯವಿರಲಿದೆ. ಬಂಧು-ಮಿತ್ರರೊಡನೆ ತೀರ್ಥಸ್ಥಳಗಳಿಗೆ ಪ್ರವಾಸ ಮಾಡುವ ಸಂಭವವಿದೆ. ನಿಮ್ಮ ಮಕ್ಕಳ ವಿದ್ಯಾಭ್ಯಾಸ ಚೆನ್ನಾಗಿರಲಿದೆ. ನಿಮ್ಮ ಸಂಗಾತಿ ಮತ್ತು ಮಕ್ಕಳಿಗೋಸ್ಕರ ಹೆಚ್ಚು ಸಮಯ ಮೀಸಲಿಡಿ.

ಪ್ರೀತಿ-ಪ್ರೇಮ/ಸಂಬಂಧ

ವರ್ಷದ ಮೊದಲಲ್ಲಿ ಪ್ರೀತಿ-ಪ್ರೇಮವೆಲ್ಲಾ ಬೇಡವೆನ್ನಿಸಿದರೂ, ಫೆಬ್ರವರಿಯ ನಂತರ ಇಷ್ಟಪಡುತ್ತೀರಿ. ಮದುವೆಯಾಗದವರಿಗೆ ನಿಮಗೆ ಮೆಚ್ಚಿಗೆಯಾಗುವಂತಹ ಜೊತೆಗಾರರು ಸಿಗಲಿದ್ದಾರೆ. ಏಪ್ರಿಲ್ ನಂತರ ನಿಮ್ಮ ಪ್ರೇಮ ಜೀವನ ಮತ್ತಷ್ಟು ಉತ್ತಮಗೊಳ್ಳಲಿದೆ. ಉತ್ತಮ ನಿರ್ಧಾರ ಸೆಪ್ಟೆಂಬರ್ ನಂತರ ತೆಗೆದುಕೊಳ್ಳಿ.

ಆರೋಗ್ಯ

ಕೆಲಸದಲ್ಲಿ ಮತ್ತು ಕುಟುಂಬದಲ್ಲಿ ಒತ್ತಡವಾಗುತ್ತದೆ ಮತ್ತು ನೀವು ಭಾವನೆಗಳನ್ನು ಹೊರಹಾಕದ ಕಾರಣ ಆರೋಗ್ಯದಲ್ಲಿ ಏರು-ಪೇರು ಕಾಣುತ್ತೀರಿ. ಖಿನ್ನತೆ ಮತ್ತು ಆತಂಕ ನಿಮ್ಮನ್ನು ಕಾಡಲಿದೆ. ಮನಸ್ಸನ್ನು ನಿಗ್ರಹದಲ್ಲಿಟ್ಟುಕೊಳ್ಳಲು ಪ್ರಾಣಾಯಾಮ ಅಭ್ಯಾಸ ಮಾಡಿ. ಪ್ರಕೃತಿಯ ಹತ್ತಿರ ಸಮಯ ಕಳೆಯಿರಿ, ಉತ್ತಮ ಗಾಳಿ, ಆಹಾರ ಸೇವಿಸಿ. ವಯಸ್ಕರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಆಸ್ತಮಾ, ಕಣ್ಣಿನ ತೊಂದರೆಗಳನ್ನು ನಿರ್ಲಕ್ಷಿಸಬೇಡಿ.

LEAVE A RESPONSE

Your email address will not be published. Required fields are marked *

Bitnami