mymandir

भारत का #1 धार्मिक सोशल नेटवर्क

ಕನ್ನಡ

2019 ಧನಸ್ಸು ರಾಶಿ ಭವಿಷ್ಯ

ಧನಸ್ಸು

ಧನಸ್ಸು ರಾಶಿಯವರು ಪ್ರೌಢರಂತೆ ಜೀವನವನ್ನು ಅರ್ಥೈಸಿಕೊಂಡವರು ಹಾಗೂ ಎಲ್ಲವನ್ನು ಸಹಿಸಿಕೊಳ್ಳುವವರು. ನೀವು ಸ್ವತಂತ್ರವಾಗಿ ನಿಮ್ಮ ತೊಂದರೆಗಳನ್ನು ಎದುರಿಸುವವರು. 2019ರಲ್ಲಿ ನಿಮಗೆ ಸಾಡೆ-ಸಾತ್ ಇದೆ. ಬಂದದ್ದೆಲ್ಲವನ್ನೂ ತಾಳ್ಮೆ ಇಂದ ಎದುರಿಸುತ್ತೀರಿ. ನೀವು ಬಹಳ ಕ್ಷುಲ್ಲಕ ವಿಚಾರಗಳೆಂದು ಭಾವಿಸಿರುವ ವಿಚಾರಗಳ ಬಗ್ಗೆ ತಪ್ಪದೇ ಗಮನ ಕೊಡಿ. ನಿಮಗೆ ಹೊಸ ಮಿತ್ರರು ಸಿಗುತ್ತಾರೆ, ನಿಮ್ಮ ಕೆಲಸದ ಪರಿಸರದಲ್ಲೂ ಹೊಸ ಮಿತ್ರರು ಸಿಗಲಿದ್ದಾರೆ.

ಉದ್ಯೋಗ ಮತ್ತು ವ್ಯಾಪಾರ

ನಿಮ್ಮ ಉದ್ಯೋಗದ ಜೀವನದಲ್ಲಿ 2019ರಲ್ಲಿ ಮಿಶ್ರ ಫಲವಿದೆ. ನಿಮ್ಮ ಬಂಡವಾಳದ ಬಗ್ಗೆ ಮತ್ತು ನಿರ್ಧಾರಗಳ ಬಗ್ಗೆ ಎಚ್ಚರವಿರಲಿ. ವರ್ಷದ ಮೊದಲ ತಿಂಗಳುಗಳು ಹೆಚ್ಚೆಚ್ಚು ಒತ್ತಡವಿರಲಿದೆ. ಕೆಲಸದಲ್ಲಿ ವರ್ಗಾವಣೆ, ಪ್ರವಾಸಗಳ ಸಂಭವವಿದೆ. ಹಣ್ದ ಲೇವಾದೇವಿ ಮಾಡುವವರಿಗೆ ಉತ್ತಮ ಲಾಭ ಸಿಗಲಿದೆ. ನಿಮ್ಮ ಪರಿಶ್ರಮಕ್ಕೆ ಮೇಲಿನವರ ಮೆಚ್ಚುಗೆ ಸಿಗಲಿದೆ. ಪ್ರಮೋಶನ್ ಮತ್ತು ಇಂಕ್ರಿಮೆಂಟುಗಳು ಸಿಗಲಿವೆ. ವರ್ಷದ ಮಧ್ಯದಲ್ಲಿ ಒತ್ತಡವಿರುತ್ತದೆ, ಶಕ್ತಿಗುಂದಿದ ಭಾವ ಬರಲಿದೆ. ವ್ಯಾಪಾರ ಮಾಡುವವರಿಗೆ ಹೊಸ ಆಲೋಚನೆಗಳು ಬರಲಿವೆ. ಸಣ್ಣ ಉದ್ಯೋಗ, ವ್ಯಾಪಾರ ಮಾಡುವವರಿಗೆ ಹೆಚ್ಚೆಚ್ಚು ಲಾಭ ಸಿಗಲಿದೆ.

ಹಣಕಾಸು

ಹೂಡಿಕೆ ಮಾಡುವಾಗ ಬಹಳ ಎಚ್ಚರವಿರಲಿ. ಖರ್ಚು ವರ್ಷದ ಮೊದಲಲ್ಲಿ ಹೆಚ್ಚಾಗಿರುತ್ತದೆ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಲೋನ್ ಮಾಡಬೇಕಾಗಬಹುದು. ಕೆಲಸದಲ್ಲಿ ಸಿಗುವ ಇಂಕ್ರಿಮೆಂಟಿನಿಂದ ನೆಮ್ಮದಿ ಸಿಗಲಿದೆ. ಹೊಸಬರೊಡನೆ ಸೇರಿ ಹೂಡಿಕೆ ಮಾಡುವುದರಿಂದ ಲಾಭ ಸಿಗಲಿದೆ, ಮತ್ತು ವಿದೇಶದಲ್ಲಿ ಹೂಡಿಕೆ ಮಾಡುವುದರಿಂದಲೂ ಲಾಭ ಗಳಿಸುವಿರಿ. ಅಕ್ಟೋಬರಿನಲ್ಲಿ ಪ್ರವಾಸಕ್ಕೆ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಖರ್ಚು ವೆಚ್ಚ ಇರಲಿದೆ.

ವಿದ್ಯಾಭ್ಯಾಸ

ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಬಗ್ಗೆ ಅತೀ ಹೆಚ್ಚು ಗಮನಕೊಟ್ಟು ಆಲಸಿತನ ಬಿಡಬೇಕು. ಉನ್ನತ ಶಿಕ್ಷಣಕ್ಕೆ ಹೋಗುವವರಿಗೆ ವರ್ಷದ ಮೊದಲ ತಿಂಗಳುಗಳಲ್ಲಿ ಸಿಹಿ ಸುದ್ದಿ ಸಿಗಲಿದೆ. ಕೆಲವರಿಗೆ ಕಾಲೇಜಿಗೆ ಸೇರುವುದರ ಬಗ್ಗೆ ತೊಡಕಾಗಬಹುದು, ಆದರೂ ಮುಂದೆ ಉತ್ತಮವಾಗಿ ವಿದ್ಯಾಭ್ಯಾಸ ಮುಂದುವರೆಸುವಿರಿ.

ಕುಟುಂಬ

ನಿಮ್ಮ ಸಂಬಂಧಿಕರ ಆರೋಗ್ಯದ ಆರೈಕೆಗಾಗಿ ನೀವು ತೊಡಗಿಸಿಕೊಳ್ಳುವಿರಿ. ಹಿರಿಯರ ಆರೋಗ್ಯದ ಚಿಂತೆ ನಿಮಗಿರಲಿದೆ. ನಿಮ್ಮ ಕುಟುಂಬದ ಕಾರ್ಯಕ್ರಮಗಳು ಚೆನ್ನಾಗಿ ಆಗುತ್ತದೆ, ಇದರ ನಿಮಿತ್ತ ನಿಮ್ಮ ಮನೆಯವರು ಮತ್ತು ಮಕ್ಕಳೊಂದಿಗೆ ಉತ್ತಮ ಬಾಂಧವ್ಯ ಬರುವಂತೆ ಮಾಡುತ್ತದೆ. ನಿಮ್ಮ ಮಕ್ಕಳು ನೀವು ಅಂದುಕೊಂಡಂತೆ ಸಾಧನೆ ಮಾಡಲಿದ್ದಾರೆ. ವರ್ಷದ ಕೊನೆಯಲ್ಲಿ ನಿಮ್ಮ ಸಂಗಾತಿಯೊಂದಿಗೆ ಮನಸ್ತಾಪವಾಗಲಿದೆ, ಆದ್ದರಿಂದ ವಾದ-ವಿವಾದಗಳನ್ನು ಕಡಿಮೆ ಮಾಡಿ. ನಿಮ್ಮ ಸಹೋದರ/ಸಹೋದರಿಯರೊಂದಿಗೆ ವೈಮನಸ್ಸಿರಲಿದೆ, ಆದರೆ ಬೇಗ ಎಲ್ಲವನ್ನು ಮರೆತು ಬಾಂಧವ್ಯವನ್ನು ಗಟ್ಟಿಗೊಳಿಸಿಕೊಳ್ಳುತ್ತೀರಿ. ನಿಮ್ಮನ್ನು ನೀವು ಒತ್ತಡಕ್ಕೆ ಸಿಕ್ಕಿಹಾಕಿಕೊಳ್ಳದಂತೆ ನೋಡಿಕೊಳ್ಳಿ. ಆಧ್ಯಾತ್ಮದ ಬಗ್ಗೆ ಒಲವು ಬರಲಿದೆ. ಹಬ್ಬ-ಹರಿದಿನಗಳನ್ನು ಚೆನ್ನಾಗಿ ನಿಮ್ಮ ಕುಟುಂಬದವರೊಡನೆ ಆಚರಿಸುತ್ತೀರಿ.

ಪ್ರೀತಿ-ಪ್ರೇಮ/ಸಂಬಂಧ

ವರ್ಷದ ಮೊದಲಿಂದಲೇ ನಿಮ್ಮ ಪ್ರೀತಿಯ ಜೀವನ ಚೆನ್ನಾಗಿರಲಿದೆ, ಬಹಳ ಉಡುಗೊರೆಗಳು ಸಿಗಲಿವೆ. ನೀವೂ ಉಡುಗೊರೆಯ ಮೇಲೆ ಬಹಳ ಖರ್ಚು ಮಾಡಬಹುದು. ನಿಮಗೆ ಉತ್ಕಟವಾದ ಸಂಬಂಧದಲ್ಲಿ ಆಸಕ್ತಿ ಇಲ್ಲವಾದರೂ, ಒಳ್ಳೆಯ ಗೆಳೆತನದಿಂದ ಸುಖವಾಗಿರುವಿರಿ. ನಿಮ್ಮ ಆತ್ಮೀಯರೊಂದಿಗೆ ಏಪ್ರಿಲ್ ನಲ್ಲಿ ಸಣ್ಣ ಪ್ರವಾಸ ಕೈಗೊಳ್ಳುವ ಸಂಭವವಿದೆ. ನಿಮ್ಮ ಕೆಲಸದ ಪರಿಸರದಲ್ಲಿ ವಿಶೇಷ ವ್ಯಕ್ತಿಯನ್ನು ಭೇಟಿ ಮಾಡಲಿರುವಿರಿ. ನಿಮ್ಮ ಸಾಮಾಜಿಕ ಜೀವನ ಉತ್ತಮವಾಗಿರಲಿದ್ದು ನಿಮ್ಮ ಗೆಳೆಯರ ಸಂಖ್ಯೆ ಹೆಚ್ಚಲಿದೆ.

ಆರೋಗ್ಯ

ಆರೋಗ್ಯ ಚೆನ್ನಾಗಿಟ್ಟುಕೊಳ್ಳಲು ಒತ್ತಡದಿಂದ ದೂರವಿರುವುದು ಒಳಿತು. ದೀರ್ಘಕಾಲದ ಖಾಯಿಲೆಗಳ ಬಗ್ಗೆ ಎಚ್ಚರವಿರಲಿ. ತಪ್ಪದೇ ದೈಹಿಕ ವ್ಯಾಯಾಮವನ್ನು ಮಾಡಿ. ವರ್ಷದ ಮೊದಲ ತಿಂಗಳುಗಳಲ್ಲಿ ಒತ್ತಡದಿಂದ ದೂರವಿರಿ. ಮೈಗ್ರೇನ್, ತಲೆನೋವುಗಳು ಕಾಡಲಿವೆ. ಉಸಿರಾಟದ ತೊಂದರೆಗಳನ್ನು ನಿರ್ಲಕ್ಷಿಸಬೇಡಿ. ನಿಮ್ಮ ಆಹಾರ ಪದ್ದತಿಯ ಬಗ್ಗೆ ಗಮನವಿರಲಿ. ಪ್ರಾಣಾಯಾಮ ಮತ್ತು ಉಸಿರಾಟದ ವ್ಯಾಯಾಮವನ್ನು ತಪ್ಪದೇ ಮಾಡಿ.

LEAVE A RESPONSE

Your email address will not be published. Required fields are marked *

Bitnami