mymandir

भारत का #1 धार्मिक सोशल नेटवर्क

ಕನ್ನಡ

2019 ತುಲಾ ರಾಶಿ ಭವಿಷ್ಯ

ತುಲಾ

ತುಲಾ ರಾಶಿಯವರು ಸಾಮರಸ್ಯವನ್ನು ಇಷ್ಟಪಡುವವರು. ಎಲ್ಲಾ ಗ್ರಹಗಳು ನಿಮಗೆ ಅನುಕೂಲಕರವಾಗಿದೆ. ನೀವು ಎಲ್ಲರನ್ನೂ ರಂಜಿಸುವವರು ಮತ್ತು ನಿಮ್ಮೊಡನೆ ಜನ ಹೆಚ್ಚು ಬೆರೆಯುತ್ತಾರೆ. ವೈಯುಕ್ತಿಕವಾಗಿ ನೀವು ಈ ವರ್ಷ ಬಹಳ ಮುಂದುವರೆಯುತ್ತೀರಿ, 2019 ನಿಮಗೆ ಉತ್ತಮವಾದ ವರ್ಷವಾಗಿದೆ. 2019ರ ನಿಮ್ಮ ವೃತ್ತಿಜೀವನವು ಬಹಳ ಉತ್ತಮವಾಗಿರಲಿದೆ ಮತ್ತು ಸಂಪತ್ತು ಗಳಿಸುವ ಸಾಧ್ಯತೆಯೂ ಇದೆ. ಪ್ರಯಾಣ ಮಾಡಲು ಈ ವರ್ಷ ನಿಮಗೆ ಉತ್ತಮವಾದುದು. ಕೆಲವು ತೊಡಕುಗಳು ನಿಮಗೆ ಉಂಟಾದರೂ ಬೇಗ ಅವನ್ನು ನೀವು ಮೆಟ್ಟಿ ನಿಲ್ಲಲಿದ್ದೀರಿ. ಆರೋಗ್ಯದ ದೃಷ್ಟಿಯಿಂದ 2019 ನಿಮಗೆ ಉತ್ತಮವಾದದ್ದು. ಬಂಧು-ಮಿತ್ರರೊಂದಿಗೆ ನಿಮ್ಮ ಸಂಬಂಧ ಚೆನ್ನಾಗಿರುತ್ತದೆ ಮತ್ತು ಸಂತೋಷದಿಂದಿರುತ್ತೀರಿ. ನಿಮ್ಮ ತೊಂದರೆಗಳಿಗೆ ನೀವು ಉತ್ತಮವಾದ ಪರಿಹಾರ ಕಂಡುಕೊಳ್ಳಬಲ್ಲಿರಿ. ಒಟ್ಟಾರೆ ತುಲಾ ರಾಶಿಯವರಿಗೆ 2019 ತುಂಬಾ ಒಳ್ಳೆಯ ವರ್ಷವಾಗಿರಲಿದೆ.

ಉದ್ಯೋಗ ಮತ್ತು ವ್ಯಾಪಾರ

ವರ್ಷದ ಮೊದಲ ತಿಂಗಳುಗಳು ನೀವು ಅಂದುಕೊಂಡಂತೆ ಇರದಿದ್ದರೂ, ಹೋಗಹೋಗುತ್ತಾ ಎಲ್ಲಾ ಸರಿಹೋಗಲಿವೆ, ನೀವು ನಿಮ್ಮ ಗುರಿಯನ್ನು ಸಾಧಿಸುವಿರಿ ಮತ್ತು ನಿಮ್ಮ ಉದ್ಯೋಗದಲ್ಲಿ ನಿಮಗೆ ತೃಪ್ತಿ ಸಿಗಲಿದೆ. ವರ್ಷದ ಮೊದಲಿನಲ್ಲಿ ಹೆಚ್ಚು ಪರಿಶ್ರಮಪಡುವುದರಿಂದ ಮುಂದೆ ನಿಮಗೆ ಒಳ್ಳೆಯದಾಗಲಿದೆ. ಹೊಸ ಆಲೋಚನೆ ಮತ್ತು ಕ್ರಿಯಾತ್ಮಕ ಕೆಲಸದಿಂದ ನಿಮ್ಮ ಉದ್ಯೋಗದಲ್ಲಿ ಒಳ್ಳೆಯ ಹೆಸರು ಮಾಡುತ್ತೀರಿ. ಕೆಲಸದ ಮೇಲೆ ನೀವು ಬಹಳ ಪ್ರಯಾಣ ಮಾಡಬೇಕಾಗಬಹುದು ಮತ್ತು ವಿದೇಶಕ್ಕೆ ಹೋಗಬೇಕಾಗಬಹುದು. ನಿಮ್ಮ ಕೆಲಸದವರು ನಿಮ್ಮನ್ನು ಮೆಚ್ಚಿಕೊಳ್ಳುತ್ತಾರೆ. ಏಪ್ರಿಲ್ ತಿಂಗಳಿನಲ್ಲಿ ಅನೇಕ ಪರೀಕ್ಷೆಗಳು ಎದುರಾಗುತ್ತದೆ ಆದರೆ ನೀವು ಅವೆಲ್ಲವನ್ನು ಮೆಟ್ಟಿ ನಿಲ್ಲುವಿರಿ. ವ್ಯಾಪಾರದಲ್ಲೂ ನಿಮಗೆ ಬಹಳ ಲಾಭ ಸಿಗಲಿದೆ, ಆದರೆ ನೀವು ನಿಮ್ಮ ವ್ಯಪಾರ-ವಹಿವಾಟನ್ನು ಬಹಳ ನಿಗದಿಂದ ನಡೆಸಬೇಕು. ಕೆಲಸ ಹುಡುಕುತ್ತಿರುವವರಿಗೆ ವರ್ಷದ ಮದ್ಯದಲ್ಲಿ ಉತ್ತಮ ಕೆಲಸ ಸಿಗಲಿದೆ. ಸ್ವಂತ ಉದ್ಯೋಗ ಮಾಡುತ್ತಿರುವವರಿಗೂ ಒಳ್ಳೆ ಲಾಭ ಸಿಗಲಿದೆ. ಆಗಸ್ಟ್ ತಿಂಗಳಲ್ಲಿ ವ್ಯಾಪಾರಸ್ಥರಿಗೆ, ಬ್ಯಾಂಕ್ ನವರಿಗೆ, ಸ್ವಂತ ಉದ್ಯೋಗ ಮಾಡುವವರಿಗೆ, ವಕೀಲರು ಮತ್ತು ಸರ್ಕಾರಿ ನೌಕರಿಯಲ್ಲಿರುವವರಿಗೆ ಲಾಭ ಸಿಗುತ್ತದೆ. ಒಟ್ಟಾರೆ, 2019ರಲ್ಲಿ ಶ್ರಮಜೀವಿಗಳಿಗೆ ಉತ್ತಮ ವರ್ಷವಾಗಿರುತ್ತದೆ.

ಹಣಕಾಸು

2019ರಲ್ಲಿ ತುಲಾ ರಾಶಿಯವರು ಹಣಗಳಿಕೆ ಚೆನ್ನಾಗಿರುತ್ತದೆ. ವರ್ಷದಾದ್ಯಂತ ಉತ್ತಮ ಬೆಳವಣಿಗೆ ನೋಡುತ್ತೀರಿ. ವ್ಯಾಪಾರಸ್ಥರು ವರ್ಷದ ಮೊದಲಲ್ಲೇ ಲಾಭಗಳಿಸಿದರೆ, ಮತ್ತೆ ನೌಕರರಿಗೆ ಸಂಬಳ ಹೆಚ್ಚುವ ಸಾಧ್ಯತೆಗಳಿದೆ ಮತ್ತು ಪ್ರಮೋಶನ್ನು ಸಿಗಲಿದೆ. ಶೇರ್ ಮಾರುಕಟ್ಟೆಯಲ್ಲಿಯೂ ಲಾಭಸಿಗಲಿದೆ. ಏಪ್ರಿಲ್-ಮೇ ನಲ್ಲಿ ವಿದೇಶದಲ್ಲಿ ಹೂಡಿಕೆ ಮಾಡುವುದರಿಂದಲೂ ಲಾಭ ಸಿಗಲಿದೆ. ವರ್ಷದ ಮಧ್ಯದಲ್ಲಿ ನಿಮಗೆ ನಿರೀಕ್ಷೆ ಇಲ್ಲದ ಕಡೆಯಿಂದ ಹಣ ಬರಲಿದೆ ಮತ್ತು ಸರ್ಕಾರದಿಂದ ಬರಬೇಕಿದ್ದ ಹಣ ಬರುತ್ತದೆ. ಸೆಪ್ಟೆಂಬರಿನಲ್ಲಿ ದುಂದುವೆಚ್ಚದ ಬಗ್ಗೆ ಗಮನವಿರಲಿ. ವರ್ಷದ ಕೊನೆಯ ತ್ರೈಮಾಸಿಕದಲ್ಲಿ ಅನೇಕ ಹೂಡಿಕ ಮಾಡಬೇಕಾಗಿಬರುತ್ತದೆ. ಒಟ್ಟಾರೆ, ಒಳ್ಳೆಯ ಹಣಕಾಸಿನ ಬೆಳವಣಿಗೆ 2019 ರಲ್ಲಿ ಸಿಗಲಿದೆ.

ವಿದ್ಯಾಭ್ಯಾಸ

ವಿದ್ಯಾರ್ಥಿಗಳಿಗೆ 2019 ಉತ್ತಮ ವರ್ಷವಾಗಿರಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಿಗಲಿದೆ, ನೀವು ಇಷ್ಟಪಟ್ಟ ಸಂಸ್ಥೆಯಲ್ಲಿ ಪ್ರವೇಶ ಸಿಗಲಿದೆ. ಉನ್ನತ ಶಿಕ್ಷಣಕ್ಕೆ ವಿದೇಶಕ್ಕೆ ಹೋಗುವ ಅವಕಾಶ ಸಿಗಲಿದೆ ಮತ್ತು ಎರಡನೇ ತ್ರೈಮಾಸಿಕದಿಂದ ಉತ್ತಮವಾಗಿರಲಿದೆ. ಕೆಲಸ ಹುಡುಕುತ್ತಿರುವವರಿಗೆ ಒಳ್ಳೆಯ ಕೆಲಸ ಸಿಗಲಿದೆ.

ಕುಟುಂಬ

ನಿಮ್ಮ ಸಂಬಂಧ ಎಲ್ಲರೊಡನೆ ಚೆನ್ನಾಗಿರಲಿದೆ. ವರ್ಷದ ಮೊದಲನೆಯ ತಿಂಗಳು ಹೆಚ್ಚು ಕಲಿಕೆಯಲಿದ್ದೀರಿ ಮತ್ತು ಮೆಚ್ಚುಗೆ ಗಳಿಸುವಿರಿ. ಪೋಷಕರು ಮತ್ತು ಸಹೋದರ/ರಿಯರೊಂದಿಗೆ ನಿಮ್ಮ ಬಾಂಧವ್ಯ ಚೆನ್ನಾಗಿರಲಿದೆ. ನಿಮ್ಮ ಸಂಗಾತಿಯ ಜೊತೆ ಸ್ವಲ್ಪ ಕಸಿವಿಸಿಯುಂಟಾಗಲಿದೆ. ನಿಮ್ಮ ದೂರದ ಸಂಬಂಧಿಕರೊಂದಿಗೆ ಪ್ರವಾಸ ಹೋಗುವ ಸಂಭವವಿದೆ. ನಿಮ್ಮ ಮಕ್ಕಳೊಂದಿಗೆ ಹೆಚ್ಚಿನ ಸಮಯ ಕಳೆಯುವಿರಿ. ನಿಮ್ಮ ಪೋಷಕರ ಆರೋಗ್ಯದ ಬಗ್ಗೆ ನಿಗ ವಹಿಸಿ. ಆಗಸ್ಟ್-ಸೆಪ್ಟೆಂಬರ್ ನಲ್ಲಿ ಹಬ್ಬ-ಹರಿದಿನಗಳನ್ನು ನಿಮ್ಮ ಆತ್ಮೀಯರೊಂದಿಗೆ ಚೆನ್ನಾಗಿ ಆಚರಿಸಲಿರುವಿರಿ. ಸಂಭ್ರಮಾಚರಣೆಗಳಲ್ಲಿ ನೀವು ಎಲ್ಲರ ಮೆಚ್ಚುಗೆ ಗಳಿಸುವಿರಿ.

ಪ್ರೀತಿ-ಪ್ರೇಮ/ಸಂಬಂಧ

ವರ್ಷದ ಮೊದಲ ತ್ರೈಮಾಸಿಕದಲ್ಲಿ ಅನೇಕ ತೊಂದರೆಗಳೆದುರಾಗಬಹುದು. ಈಗಾಗಲೇ ಸಂಬಂಧದಲ್ಲಿರುವವರು ವೈಮನಸ್ಸು ಬಂದಾಗ ಅತಿರೇಖಕ್ಕೆ ಹೋಗದಿರುವುದು ಒಳಿತು, ನಿಮ್ಮ ಸಂಗಾತಿಯ ಒಳ್ಳೆಯ ಗುಣಗಳ ಬಗ್ಗೆ ಹೆಚ್ಚು ಗಮನವಹಿಸಿ. ಮದುವೆಯಾಗದಿರುವವರಿಗೆ ಮದುವೆಯ ಪ್ರಸ್ತಾಪ ಬರಬಹುದು, ನೀವು ಎಚ್ಚರದಿಂದ ನಿಮ್ಮ ಸಂಗಾತಿಯನ್ನು ಆಯ್ಕೆ ಮಾಡಿ. ಹಿರಿಯರು ನಿಮ್ಮ ಪ್ರಸ್ತಾಪವನ್ನು ಮೆಚ್ಚಿ ಆಶೀರ್ವದಿಸಲಿದ್ದಾರೆ. ವಿಚ್ಛೇದನವಾಗಿರುವವರಿಗೂ ಜೂನ್ ನಂತರದಲ್ಲಿ ಒಳ್ಳೆಯ ಸಂಗಾತಿ ದೊರೆಯಲಿದ್ದಾರೆ.

ಆರೋಗ್ಯ

ವರ್ಷದಾದ್ಯಂತ ನಿಮ್ಮ ಆರೋಗ್ಯ ಚೆನ್ನಾಗಿರಲಿದೆ, ಆದರೆ ಕೆಲವು ಸಣ್ಣ-ಪುಟ್ಟ ತೊಂದರೆಗಳು ಕಾಣಿಸಿಕೊಳ್ಳಬಹುದು. ವಯಸ್ಕರು ಜೀರ್ಣದ ಸಮಸ್ಯೆಯ ಬಗ್ಗೆ ಮತ್ತು ಅಸಿಡಿಟಿಯ ಬಗ್ಗೆ ಗಮನಕೊಟ್ಟರೆ ಒಳ್ಳೆಯದು. ಪ್ರಯಾಣದ ವೇಳೆಯಲ್ಲಿ ನಿಮ್ಮ ಆಹಾರದ ಬಗ್ಗೆ ನಿಗವಹಿಸಬೇಕು. ಮೈಗ್ರೇನ್ ಮತ್ತು ಬಾಯಿ ಹುಣ್ಣಿನಂತೆ ಸಮಸ್ಯೆ ವರ್ಷದ ಮಧ್ಯದಲ್ಲಿ ಕಾಡಲಿದೆ.

LEAVE A RESPONSE

Your email address will not be published. Required fields are marked *

Bitnami