mymandir

भारत का #1 धार्मिक सोशल नेटवर्क

ಕನ್ನಡ

2019 ಕುಂಭ ರಾಶಿ ಭವಿಷ್ಯ

ಕುಂಭ

ಕುಂಭ ರಾಶಿಯವರು ಏನನ್ನೂ ಮುಚ್ಚು-ಮರೆ ಮಾಡದಿರುವವರು, ಸ್ವಾತಂತ್ರ್ಯವನ್ನು ಇಷ್ಟಪಡುವವರು. ನೀವು ನಿಮಗೆ ಅನ್ನಿಸಿದಂತೆ ಮಾಡಲು ಇಚ್ಛಿಸುವವರು ಮತ್ತು ಇತರರ ಮಾತುಗಳಿಗೆ ಮರುಳಾಗದವರು. ನೀವು ಸಾಮಾಜಿಕವಾಗಿ ಮತ್ತು ಕೆಲಸ ಕಾರ್ಯದಲ್ಲಿ ಉನ್ನತ ಮಟ್ಟಕ್ಕೆ ಏರಲು ಆಸೆಪಡುವವರು. ನೀವು 2019 ಹೆಚ್ಚು ನಿಮ್ಮ ಗುರಿಯ ಕಡೆಗೆ ಕೆಲಸ ಮಾಡುತ್ತೀರಿ ಮತ್ತು ತಕ್ಕ ಫಲಿತಾಂಶವನ್ನೂ ಪಡೆಯುತ್ತೀರಿ. ಬಂಧು-ಮಿತ್ರರಿಂದ ನಿಮಗೆ ಸಾಕಷ್ಟು ಸಹಾಯ ಸಿಗಲಿದೆ. ಸಾಮಾಜಿಕ ಕಾರ್ಯಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಲಿರುವಿರಿ.

ಉದ್ಯೋಗ ಮತ್ತು ವ್ಯಾಪಾರ

2019 ನಿಮಗೆ ಪೂರಕವಾದ ಮತ್ತು ತೃಪ್ತಿಕೊಡುವ ವರ್ಷವಾಗಿರಲಿದೆ. ಕೆಲಸದಲ್ಲಿ ಏರು-ಪೇರಿದ್ದರೂ, ಒಟ್ಟಾರೆ ಉತ್ತಮ ವರ್ಷವಾಗಿರಲಿದೆ. ನಿಮ್ಮ ಕೆಲಸದ ಪರಿಸರ ಚೆನ್ನಾಗಿರಲಿದೆ. ಹೊಸ ವ್ಯವಹಾರವು ನಿಧಾನವಾಗಿ ಉತ್ತಮಗೊಳ್ಳುತ್ತಾ ಹೋಗುತ್ತದೆ. ಕೆಲಸದ ಮೇಲೆ ಹೊರ ದೇಶಕ್ಕೆ ಹೋಗುವ ಸಂಭವವಿದೆ. ಸ್ವಂತ ಉದ್ಯೋಗ ಪ್ರಾರಂಭಿಸುವವರಿಗೆ ಒಳ್ಳೆಯದಾಗಲಿದೆ. ವರ್ಷದ ಮಧ್ಯದ ತಿಂಗಳುಗಳಲ್ಲಿ ಪ್ರಮೋಶನ್ನು, ಇಂಕ್ರಿಮೆಂಟುಗಳು ಸಿಗಲಿವೆ.

ಹಣಕಾಸು

2019ರಲ್ಲಿ ನಿಮ್ಮ ಹಣಕಾಸಿನ ಪರಿಸ್ಥಿತಿ ಉತ್ತಮಗೊಳ್ಳಲಿದೆ. ವರ್ಷದ ಮೊದಲಿನಲ್ಲಿ ಉದ್ಯೋಗದಲ್ಲಿ ಒಳ್ಳೆಯ ವರಮಾನ ಸಿಗಲಿದೆ. ಭವಿಷ್ಯಕ್ಕಾಗಿ ಹೂಡಿಕೆ ಮಾಡಲಿರುವಿರಿ. ಆಸ್ತಿಯ ಮಾರಾಟದಿಂದಲೂ ನಿಮಗೆ ಹಣ ಲಭಿಸಲಿದೆ. ಮಾರ್ಚಿ – ಏಪ್ರಿಲ್ ನಲ್ಲಿ ಹೊಸ ವಾಹನ ತೆಗೆದುಕೊಳ್ಳುವ ಸಲುವಾಗಿ ಖರ್ಚು ಮಾಡುವ ಸಂಭವವಿದೆ. ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದರಿಂದ ಉತ್ತಮ ಲಾಭ ಸಿಗಲಿದೆ. ಬಹಳ ದಿನಗಳಿಂದ ಬರಬೇಕಿದ್ದ ಹಣ ನಿಮಗೆ ಬರಲಿದೆ.

ವಿದ್ಯಾಭ್ಯಾಸ

ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆಯಲು ಬಹಳ ಪರಿಶ್ರಮ ಹಾಕಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವವರಿಗೆ ಮೊದಲ ತ್ರೈಮಾಸಿಕದಲ್ಲಿ ಒಳ್ಳೆಯ ಫಲಿತಾಂಶ ಸಿಗಲಿದೆ. ತಂತ್ರಜ್ಞಾನ ಮತ್ತು ವೈದ್ಯಕೀಯ ವಿದ್ಯಾರ್ಥಿಗಳಿಗೆ ಒಳ್ಳೆಯದಾಗಲಿದೆ. ಕಲೆಯ ವಿದ್ಯಾರ್ಥಿಗಳಿಗೆ ಮಾರ್ಚಿ ತಿಂಗಳಲ್ಲಿ ಉತ್ತಮ ಫಲಿತಾಂಶ ಸಿಗಲಿದೆ. ಉನ್ನತ ವ್ಯಾಸಾಂಗ ಮಾಡಬಯಸುವವರಿಗೆ ವಿದ್ಯಾರ್ಥಿವೇತನ ಸಿಗಲಿದೆ. ಶಿಕ್ಷಣ ಮುಗಿಸುವವರಿಗೆ ಒಳ್ಳೆಯ ಕೆಲಸ ಸಿಗಲಿದೆ.

ಕುಟುಂಬ

ನಿಮ್ಮ ಜೀವನದಲ್ಲಿ ಶಾಂತಿ, ನೆಮ್ಮದಿ ಇರಲಿದ್ದು ಒಳ್ಳೆಯ ಬಾಂಧವ್ಯವಿರಲಿದೆ. ನಿಮ್ಮ ಕುಟುಂಬಸ್ಥರ ಜೊತೆ ಒಳ್ಳೆಯ ಬಾಂಧವ್ಯ ಕಟ್ಟಿಕೊಳ್ಳುತ್ತೀರಿ. ವರ್ಷದ ಮೊದಲಲ್ಲಿ ನಿಮ್ಮ ಸಹೋದರರೊಡನೆ ವೈಮನಸ್ಸಿದ್ದರೂ ಅದನ್ನು ಸರಿಪಡಿಸಿಕೊಳ್ಳುವಿರಿ. ನಿಮ್ಮ ಸಂಗಾತಿ ಮಕ್ಕಳ ಜೊತೆ ನಿಮ್ಮ ಸಂಬಂಧ ಚೆನ್ನಾಗಿರಲಿದೆ. ಬೇಡದ ಮಾತು, ಚರ್ಚೆಗಳನ್ನು ಮಾಡಬೇಡಿ. ಏಪ್ರಿಲ್ ನಲ್ಲಿ ಮಕ್ಕಳಿಗೆ ನಿಮ್ಮ ಅಗತ್ಯವಿರುತ್ತದೆ ಮತ್ತು ಅವರು ನಿಮಗೆ ಹೆಮ್ಮೆಯಾಗುವಂತೆ ನಡೆದುಕೊಳ್ಳುತ್ತಾರೆ. ನಿಮ್ಮ ಕುಟುಂಬದಲ್ಲಿ ಮಗು ಜನಿಸುವುದರಿಂದ ಸಂತೋಷ ವೃದ್ಧಿಯಾಗಲಿದೆ.

ಪ್ರೀತಿ-ಪ್ರೇಮ/ಸಂಬಂಧ

ಕುಂಭ ರಾಶಿಯವರು ಇತರರೊಡನೆ ಉತ್ತಮ ಸಂಬಂಧ ಇಟ್ಟುಕೊಳ್ಳುವಂಥವರು. ಅವರು ತಮ್ಮ ಭಾವನೆಗಳ ಮೇಲೆ ಬಹಳ ಹಿಡಿತ ಸಾಧಿಸಿರುವವರು. ಸರಿಯಾದ ಸಂಗಾತಿ ಸಿಗದಿದ್ದಲ್ಲಿ ಇವರ ಸಂಬಂಧ ತುಂಬಾ ಅಸ್ಥಿರವಾಗಿರುತ್ತದೆ. ವರ್ಷದ ಮೊದಲಲ್ಲಿ ಸ್ವಾತಂತ್ರ್ಯವಾಗಿರಬೇಕೆಂದುಕೊಳ್ಳುತ್ತೀರಿ, ಆದರೂ ನಿಮ್ಮ ಭಾವನೆಗಳನ್ನು ಮೆಟ್ಟಿ ಒಂದು ಬಂಧನ ಬೇಕೆಂದುಕೊಳ್ಳುತ್ತೀರಿ. ಸಂಗಾತಿಗಳೊಡನೆ ವೈಮನಸ್ಸಾಗಬಹುದು.

ಆರೋಗ್ಯ

ಒಟ್ಟಾರೆ ಆರೋಗ್ಯ ಉತ್ತಮವಾಗಿರಲಿದೆ. ಆಹಾರ, ನೀರು ಮತ್ತು ಹವಾಮಾನ ವ್ಯತ್ಯಾಸದಿಂದ ತೊಂದರೆ ಕಾಣಿಸಿಕೊಳ್ಳಬಹುದು. ಉತ್ತಮ ಜೀವನಶೈಲಿ ಮತ್ತು ವ್ಯಾಯಾಮಗಳನ್ನು ಅಳವಡಿಸಿಕೊಳ್ಳಿ. ಉಸಿರಾಟದ ತೊಂದರೆಗಳಾದ ಅಸ್ತಮಾ, ಬ್ರಾಂಕೈಟಿಸ್ ಬಗ್ಗೆ ಎಚ್ಚರವಿರಲಿ. ನಿಮ್ಮ ಮಾನಸಿಕ ಆರೋಗ್ಯದ ಬಗ್ಗೆ ಎಚ್ಚರವಹಿಸಿ. ಮಳೆಗಾಲದಲ್ಲಿ ಆರೋಗ್ಯದಲ್ಲಿ ಏರು-ಪೇರು ಉಂಟಾಗುವ ಸಂಭವವಿದೆ.

LEAVE A RESPONSE

Your email address will not be published. Required fields are marked *

Bitnami